ಮೇಷ: ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು. ಏಕೆಂದರೆ, ಅದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ರಾತ್ರೋರಾತ್ರಿ ಬರುವುದಿಲ್ಲವಾದ್ದರಿಂದ ನೀವು ತಾಳ್ಮೆಯಿಂದ ಇರಬೇಕು.
ವೃಷಭ:ನಿಮ್ಮದೇ ಮೈಲಿಗಲ್ಲುಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸನ್ನು ಸಂಭ್ರಮಿಸುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಪ್ರಗತಿಪರವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ. ಸಾಮಾಜಿಕ ಸಭೆಗಳು ಮತ್ತು ಪಾರ್ಟಿಗಳು ಉಲ್ಲಾಸ ತರುತ್ತವೆ.
ಮಿಥುನ: ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ವಿಷಯಗಳ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇಂದು ನೀವು ಕೊಂಚ ಅವಿಶ್ರಾಂತರಾಗುತ್ತೀರಿ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮನಸ್ಸು ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು.
ಕರ್ಕಾಟಕ:ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ. ತಮ್ಮ ಕೆಲಸಕ್ಕೆ ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.
ಸಿಂಹ: ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಸೌಖ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ. ಆದರೆ ಎಲ್ಲಾ ಕೆಲಸ ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳ ಮತ್ತು ವಿಶ್ರಾಂತಿಗೆ ದಾರಿಗಳನ್ನು ಹುಡುಕಿರಿ.
ಕನ್ಯಾ:ಆರೋಗ್ಯದ ವಿಷಯಕ್ಕೆ ಬಂದರೆ ನಿರ್ಲಕ್ಷ್ಯ ಅಥವಾ ಮುಂದೂಡಿಕೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೀರಿ. ಆದರೆ, ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು. ನೀವು ಇಂದು ವಿನೋದ ಮತ್ತು ಮನರಂಜನೆಯಲ್ಲಿ ಸಮಯ ಖರ್ಚು ಮಾಡುತ್ತೀರಿ.