ಕರ್ನಾಟಕ

karnataka

ETV Bharat / bharat

ಭಾನುವಾರದ ನಿಮ್ಮ ರಾಶಿ ಭವಿಷ್ಯದಲ್ಲಿ ಏನುಂಟು, ಏನಿಲ್ಲ?

ನಿಮ್ಮ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ಓದಿ..

ರಾಶಿ ಭವಿಷ್ಯ
Daily horoscope

By

Published : Aug 22, 2021, 6:45 AM IST

ಮೇಷ: ಭವಿಷ್ಯದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಮ್ಮೆ ಯೋಚನೆ ಮಾಡುವುದು ಒಳ್ಳೆಯದು. ಹಿರಿಯರಿಂದ ಮಾರ್ಗದರ್ಶನ ಪಡೆದುಕೊಳ್ಳಿ, ಜ್ಯೋತಿಷ್ಯದ ನಕ್ಷೆಗಳನ್ನು ತೆಗೆದುಕೊಳ್ಳಿ, ನೀವು ಇಂದು ಆನಂದದಿಂದ ಇರುತ್ತೀರಿ.

ವೃಷಭ: ವಾದ-ವಿವಾದಗಳು ಮತ್ತು ಆಕ್ರಮಣಕಾರಿ ವರ್ತನೆಯ ಛಾಯೆಗಳು ದಿನದ ಬಹುತೇಕ ಭಾಗ ಇರುತ್ತದೆ. ನೀವು ಮಧ್ಯಾಹ್ನ ಮಿತ್ರರೊಂದಿಗೆ ದೀರ್ಘ ಚರ್ಚೆಗಳಲ್ಲಿ ಕಳೆಯಬಹುದು. ಸಂಜೆಯ ವೇಳೆಗೆ ವಿಷಯಗಳು ಬದಲಾಗುತ್ತವೆ. ನಿಮ್ಮ ಜೀವನಸಂಗಾತಿಯಿಂದ ವಿಶೇಷ ಆತಿಥ್ಯ ದೊರೆಯಬಹುದು.

ಮಿಥುನ: ಇಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಕಠಿಣ ಕಾರ್ಯ. ಸಮಸ್ಯೆ ಪರಿಹರಿಕೊಳ್ಳಲು ಸಮಯ ಬೇಕಾಗಬಹುದು. ಆದರೆ ಭರವಸೆ ಕಳೆದುಕೊಳ್ಳಬೇಡಿ. ಛಲ ಮತ್ತು ಕಠಿಣ ಪರಿಶ್ರಮಕ್ಕೆ ಬೆಲೆ ಬರುತ್ತದೆ. ನೀವು ನಿಮ್ಮ ಸುತ್ತಲಿರುವವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ. ನೀವು ನಿಮ್ಮ ಪ್ರಿಯತಮೆಯನ್ನು ಶಾಪಿಂಗ್​ಗೆ ಕರೆದೊಯ್ಯುತ್ತೀರಿ.

ಕರ್ಕಾಟಕ: ಇಂದು ನೀವು ಬಹುತೇಕ ಆಕ್ರಮಣಕಾರಿಯಾಗಿ ವರ್ತಿಸುತ್ತೀರಿ. ಮಧ್ಯಾಹ್ನವನ್ನು ವ್ಯಾಪಾರದ ಸಹವರ್ತಿಗಳೊಂದಿಗೆ ಕಳೆಯುತ್ತೀರಿ ಮತ್ತು ನೀವು ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿತ ರೀತಿಯಲ್ಲಿ ಬಳಸಿದರೆ, ಇಂದು ಬಹಳ ಮುಖ್ಯವಾದ ವ್ಯವಹಾರ ಪಡೆಯುತ್ತೀರಿ. ಸಂಜೆಯಲ್ಲಿ ನಿಮ್ಮ ಸಂಗಾತಿ ಆತ/ಆಕೆಯ ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ನೀವು ಆಕಾಶದಲ್ಲಿ ತೇಲುತ್ತೀರಿ.

ಸಿಂಹ: ನೀವು ಇಂದು ನಿಮ್ಮ ಸಿದ್ದಾಂತಗಳಲ್ಲಿ ರಾಜಿಯಾಗುವುದಿಲ್ಲ ಮತ್ತು ನಿಮ್ಮಲ್ಲಿಯೇ ಸಂತೃಪ್ತರಾಗುತ್ತೀರಿ. ಆದಾಗ್ಯೂ, ನಿಮ್ಮ ಸಮಾಧಾಕರ ವಿಧಾನವನ್ನು ಬಿಡದಿರಿ. ಇದು ನಿಮ್ಮ ವೃತ್ತಿ ವ್ಯವಹಾರಗಳಲ್ಲಿ ನೀವು ಪ್ರಾಯೋಗಿಕ ಮತ್ತು ವ್ಯಾಪಾರ ರೀತಿಯಲ್ಲಿದ್ದರೆ ನೆರವಾಗುತ್ತದೆ.

ಕನ್ಯಾ: ನೀವು ಕ್ಷುಲ್ಲಕ ವಿಷಯಗಳಿಂದ ಬೇಸರಗೊಳ್ಳುತ್ತೀರಿ. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವ ಕೋರ್ಸ್​ವೊಂದಕ್ಕೆ ಸೇರಿಕೊಳ್ಳಲು ನಿಮ್ಮ ಕುಟುಂಬ ಪ್ರೇರೇಪಿಸುತ್ತದೆ. ಆಪ್ತ ಸಂವಹನವು ನಿಮ್ಮನ್ನು ಲೈಂಗಿಕ ಆನಂದಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.

ತುಲಾ: ಇಂದು ನೀವು ಹಿಂದಿನ ಒಳ್ಳೆಯ ನೆನಪುಗಳನ್ನು ಜ್ಞಾಪಿಸಿಕೊಳ್ಳಲು ಇಚ್ಛಿಸುತ್ತೀರಿ. ಸಮಾನ ಮನಸ್ಕರೊಂದಿಗೆ ಕುಳಿತು ನಿಮ್ಮ ಆಲೋಚನೆ ಮತ್ತು ಚಿಂತನೆಗಳನ್ನು ಹಂಚಿಕೊಳ್ಳುತ್ತೀರಿ. ತತ್ವಶಾಸ್ತ್ರ, ಧರ್ಮ ಇತ್ಯಾದಿ ಚರ್ಚೆ ನಡೆಸುತ್ತೀರಿ. ಪ್ರಸ್ತುತಕ್ಕೆ ಗಮನ ನೀಡುವುದು ಮತ್ತು ಭೂತ ಅಥವಾ ಭವಿಷ್ಯದ ಕುರಿತು ಚಿಂತಿಸುವ ಬದಲು ಆನಂದವಾಗಿರುವುದು ಉತ್ತಮ.

ವೃಶ್ಚಿಕ: ಇಂದು ನಿಮಗೆ ಸಾಕಷ್ಟು ಆಶ್ಚರ್ಯಗಳು ಕಾದಿವೆ. ನಿಗೂಢವನ್ನು ನಿಧಾನವಾಗಿ ಅನಾವರಣ ಮಾಡುವ ಸಮಯ. ವ್ಯಾಪಾರ ಸಭೆಗಳು ಮತ್ತು ವೃತ್ತಿಪರ ಚರ್ಚೆಗಳ ವಿಷಯಕ್ಕೆ ಬಂದರೆ ಚೆಂಡು ನಿಮ್ಮ ಅಂಗಳದಲ್ಲಿದೆ. ನಿಮ್ಮ ಹಾಸ್ಯ ಪ್ರಜ್ಞೆ ನಿಮ್ಮ ಸುತ್ತಲು ಇರುವವರನ್ನು ಮಾಂತ್ರಿಕ ರೀತಿಯಲ್ಲಿ ಸೆಳೆಯುತ್ತದೆ.

ಧನು: ನಿಮ್ಮ ಪ್ರಿಯತಮೆ ನಿಮ್ಮ ದಿನವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ. ನೀವು ಹಗಲು ಗನಸು ಕಾಣುತ್ತೀರಿ. ನೀವು ಮತ್ತು ನಿಮ್ಮ ಮಿತ್ರರು ಶಾಪಿಂಗ್ ಮಾಡುತ್ತೀರಿ. ಈ ಹಿತವಾದ ದಿನವನ್ನು ಸರಿಯಾಗಿ ಬಳಸಿಕೊಳ್ಳಿ.

ಮಕರ: ಇಂದು ನೀವು ಹಿಂದೆ ಯಾವ ತಪ್ಪುಗಳನ್ನು ಮಾಡಿದ್ದೀರಿ ಎಂದು ಕುಳಿತು ಆಲೋಚಿಸುತ್ತೀರಿ. ಶ್ರಮಪಟ್ಟು ಕೆಲಸ ಮಾಡಿ ತಂಡಕ್ಕೆ ಯಶಸ್ಸು ತಂದುಕೊಡುತ್ತೀರಿ. ಆದಾಗ್ಯೂ, ನಿಮ್ಮ ಪ್ರಯತ್ನಗಳು ಗಮನಿಸದೇ ಹೋಗಬಹುದು ಮತ್ತು ಅಗತ್ಯವಿದ್ದಷ್ಟು ಪ್ರಶಂಸೆ ಸಿಗದಿರಬಹುದು.

ಕುಂಭ: ಈ ದಿನ ಮಿತ್ರರಿಗಾಗಿ. ನೀವು ಮಾತು, ಹಾಡು, ಕೂಗಾಟ ಮತ್ತು ತತ್ವಶಾಸ್ತ್ರ, ಮೌಲ್ಯಗಳು ಮತ್ತು ರಾಜಕೀಯವನ್ನು ನಿಮ್ಮ ಮಿತ್ರರೊಂದಿಗೆ ಚರ್ಚಿಸುತ್ತೀರಿ. ನೀವು ಸಂಗಾತಿಯೊಂದಿಗೆ ಪ್ರಣಯ ಪೂರ್ವಕ ಸಂಜೆಯನ್ನು ರೆಸ್ಟೋರೆಂಟ್ ಅಥವಾ ಬೀಚ್ ನಲ್ಲಿ ಅಥವಾ ಸರಳವಾಗಿ ಸೋಫಾದ ಮೇಲೆ ಕಳೆಯುತ್ತೀರಿ.

ಮೀನ: ಪ್ರಣಯ ಸಂಬಂಧಗಳಿಗೆ ಇಂದು ತಿರುವಿನ ಸಾಧ್ಯತೆ ಇದೆ. ಇಂದು ನೀವು ಕಠಿಣ ಪರಿಶ್ರಮ ಪಡುತ್ತೀರಿ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಇಂದು ದೊರೆಯುತ್ತದೆ.

ABOUT THE AUTHOR

...view details