ಪಾಲ್ಘರ್(ಮಹಾರಾಷ್ಟ್ರ):ಬಲವಂತದ ಮತಾಂತರ ಕಾನೂನಿನ ವಿರುದ್ಧವಾಗಿದ್ದರೂ, ಮಹಾರಾಷ್ಟ್ರದಲ್ಲಿ ಆದಿವಾಸಿಗರನ್ನು ಮತಾಂತರಕ್ಕೆ ದೂಡಿದ ಆರೋಪದ ಮೇರೆಗೆ ನಾಲ್ವರು ಕ್ರಿಶ್ಚಿಯನ್ ಧರ್ಮ ಗುರುಗಳನ್ನು ಬಂಧಿಸಲಾಗಿದೆ.
ಪಾಲ್ಘರ್ ಜಿಲ್ಲೆಯಲ್ಲಿ ಆದಿವಾಸಿ ಮಹಿಳೆಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುವಂತೆ ಬಲವಂತ ಮಾಡಲಾಗುತ್ತಿತ್ತು. ಅಲ್ಲದೇ, ಆಕೆಗೆ ಹಣದ ಆಮಿಷ ತೋರಿಸಲಾಗಿತ್ತು. ಈ ಬಗ್ಗೆ ತಿಳಿದ ಹಿಂದೂಪರರು ಸ್ಥಳಕ್ಕಾಗಮಿಸಿ ವಿಚಾರಿಸಿದ್ದಾರೆ. ಈ ವೇಳೆ, ಮಹಿಳೆ ತನಗೆ ಹಣದ ಆಮಿಷ ಒಡ್ಡಿದ್ದಲ್ಲದೇ, ಮತಾಂತರ ಹೊಂದಲು ಬಲವಂತ ಮಾಡಲಾಯಿತು ಎಂದು ದೂರಿದ್ದಾರೆ.