ದಾದ್ರಾ & ನಗರ ಹವೇಲಿ:ಕೇಂದ್ರಾಡಳಿತ ಪ್ರದೇಶ ದಾದ್ರಾ & ನಗರ ಹವೇಲಿ ಪಕ್ಷೇತರ ಸಂಸದ ಮೋಹನ್ ಡೆಲ್ಕರ್ ನಿಗೂಢವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಸೌತ್ ಮುಂಬೈ ಹೋಟೆಲ್ವೊಂದರಲ್ಲಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದು, ಹೀಗಾಗಿ ಇದೊಂದು ಆತ್ಮಹತ್ಯೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. 58 ವರ್ಷದ ಮೋಹನ್ ಡೆಲ್ಕರ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
1986-89ರವರೆಗೆ ದಾದ್ರಾ & ನಗರ ಹವೇಲಿ ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಆಗಿದ್ದ ಇವರು, 1989ರಲ್ಲಿ ಕಾಂಗ್ರೆಸ್ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1991 ಹಾಗೂ 1996ರಲ್ಲಿ ಸತತವಾಗಿ ಸಂದರಾಗಿ ಇವರು ಲೋಕಸಭೆಯಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ಪ್ರಧಾನಿ ಮೋದಿ ಜತೆ ಸಂಸದ ಡೆಲ್ಕರ್
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದು ಗುಜರಾತಿ ಭಾಷೆಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.