ಕರ್ನಾಟಕ

karnataka

ETV Bharat / bharat

ಎನ್​ಕೌಂಟರ್​ ಮೂಲಕ ಡಕಾಯಿತ ಗೌರಿ ಯಾದವ್​ ಹತ್ಯೆ - ಚಿತ್ರಕೂಟ್​ ಡಕಾಯಿತ

ಚಿತ್ರಕೂಟ್​ನಲ್ಲಿ ಡಕಾಯಿತ ಗೌರಿ ಯಾದವ್​ ಎನ್​ಕೌಂಟರ್​ ಮೂಲಕ ಕೊಲ್ಲಲ್ಪಟ್ಟನು.

dacoit gauri yadav killed in encounter in chitrakoot by u p stf
ಎನ್​ಕೌಂಟರ್​ ಮೂಲಕ ಡಕಾಯಿತ ಗೌರಿ ಯಾದವ್​ ಹತ್ಯೆ

By

Published : Oct 30, 2021, 11:26 AM IST

ಚಿತ್ರಕೂಟ್​: ಉತ್ತರ ಪ್ರದೇಶದ ಚಿತ್ರಕೂಟ್​ನಲ್ಲಿ ಡಕಾಯಿತ ಗೌರಿ ಯಾದವ್​ ಎನ್​ಕೌಂಟರ್​ ಮೂಲಕ ಕೊಲ್ಲಲ್ಪಟ್ಟನು. ಈ ವಿಚಾರವನ್ನು ಯುಪಿ ಎಸ್​ಟಿಎಫ್​​ ಹೇಮರಾಜ್ ಮೀನಾ ಖಚಿತಪಡಿಸಿದ್ದಾರೆ.

ಬಹಿಲ್‌ಪುರವಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವ್ ಅಣೆಕಟ್ಟು ಬಳಿ ಎನ್‌ಕೌಂಟರ್ ನಡೆದಿದೆ. ಗೌರಿ ಯಾದವ್​ನಿಂದ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ, AK47 ನಂತಹ ಶಸ್ತ್ರಾಸ್ತ್ರಗಳೂ ಸೇರಿವೆ.

ಡಕಾಯಿತ ಗೌರಿ ಯಾದವ್ ಹಿಡಿದುಕೊಟ್ಟವರಿಗೆ 5.5 ಲಕ್ಷ ರೂಪಾಯಿಯ ಬಹುಮಾನ ಘೋಷಿಸಲಾಗಿತ್ತು. ಇನ್ನು ಮಾರ್ಚ್ 31 ರಂದು ಮಾಧವ್ ಅಣೆಕಟ್ಟಿನ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಡಕಾಯಿತ ಭಾಲ್‌ಚಂದ್‌ನನ್ನು ಕೊಂದಿತ್ತು. ಈತನನ್ನು ಹಿಡಿದುಕೊಟ್ಟವರಿಗೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಎಸ್‌ಟಿಎಫ್ ಘೋಷಿಸಿತ್ತು.

ದಾದುವಾ ಮತ್ತು ಥೋಕಿಯಾ ನಂತರ, ರಗಡ್‌ನಲ್ಲಿ ಗೌರಿ ಯಾದವ್ ಡಕಾಯಿತನಾಗಿ ಭಯ ಸೃಷ್ಟಿಸಿದ್ದ. ಬಹಳ ದಿನಗಳಿಂದ ಗೌರಿ ಯಾದವ್‌ಗಾಗಿ ಹುಡುಕಾಟ ನಡೆಯುತ್ತಿತ್ತು. ನಾಲ್ಕು ತಿಂಗಳ ಹಿಂದೆ ಚಿತ್ರಕೂಟದ ಅರಣ್ಯದಲ್ಲಿ ಗುಂಡಿನ ದಾಳಿ ನಡೆಸಿ ಆತಂಕ ಸೃಷ್ಟಿಯಾಗಿತ್ತು.

ABOUT THE AUTHOR

...view details