ನವದೆಹಲಿ: ಕೇಂದ್ರೀಯ ಬ್ಯಾಂಕ್ ಆರ್‌ಬಿಐ ನೇರವಾಗಿ ಹಣ ಮುದ್ರಿಸಬಹುದು ಮತ್ತು ಅದರಿಂದ ಸರ್ಕಾರಕ್ಕೆ ಹಣಕಾಸು ಒದಗಿಸಬಹುದು. ಆದರೆ, ಯಾವುದೇ ಪರ್ಯಾಯ ಮಾರ್ಗಗಳಿದ್ದಾಗ ಹಾಗೆ ಮಾಡುವುದನ್ನು ತಪ್ಪಿಸಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಬುಧವಾರ ಹೇಳಿದ್ದಾರೆ.
ಆರ್‌ಬಿಐ ನೇರವಾಗಿ ಹಣ ಮುದ್ರಿಸಿ ಸರ್ಕಾರಕ್ಕೆ ನೀಡುವ ಯಾವ ಕಾರಣವೂ ಈಗ ಭಾರತದಲ್ಲಿ ಇಲ್ಲ ಎಂದು ಗಮನಸೆಳೆದಿದ್ದಾರೆ. ಮಾರ್ಚ್ 2021 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ಶೇ 7.3 ಕ್ಕಿಂತ ಕಡಿಮೆಯಾಗಿದೆ. 2021-22ರಲ್ಲಿ ಈ ಕೊರತೆಯನ್ನು ಜಿಡಿಪಿಯ ಶೇ 6.8 ಕ್ಕೆ ಇಡಲಾಗಿದೆ. ಇದನ್ನು 2025-26ರ ವೇಳೆಗೆ ಶೇ 4.5ಕ್ಕೆ ಇಳಿಸಲಾಗುವುದು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.
ಕೊರೊನಾ ವೈರಸ್ ಎರಡನೇ ಅಲೆಯಿಂದ ಉಂಟಾದ ಅನಿಶ್ಚಿತತೆಗಳ ಮಧ್ಯೆ, ರಿಸರ್ವ್ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ದೇಶದ ಬೆಳವಣಿಗೆಯ ದರವನ್ನು ನಿರೀಕ್ಷಿತ ಶೇ 10.5 ರಿಂದ ಶೇ 9.5 ಕ್ಕೆ ಇಳಿಸಿದೆ. ಸಾಲ ಸಂಗ್ರಹಿಸಲು ಕೋವಿಡ್ ಬಾಂಡ್ ಒಂದು ಆಯ್ಕೆಯೇ ಎಂಬ ಪ್ರಶ್ನೆಗೆ, ಮಾರುಕಟ್ಟೆಯಲ್ಲಿ ಸಾಲ ಪಡೆಯುವ ಬದಲು ಕೋವಿಡ್ ಬಾಂಡ್‌ಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಸರ್ಕಾರವು ತನ್ನ ಸಾಲ ಅಗತ್ಯತೆಗಳ ಒಂದು ಭಾಗವನ್ನು ಪೂರೈಸಿಕೊಳ್ಳಬಹುದು ಎಂದು ಸುಬ್ಬರಾವ್ ಹೇಳಿದರು.