ಮಧುರೈ (ತಮಿಳುನಾಡು):ಮಧುರೈನ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಇಬ್ಬರು ಗರ್ಭಿಣಿ ಮಹಿಳೆಯರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ವಜಾಗೊಳಿಸುವಂತೆ ಮಧುರೈ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಮಧುರೈ ಜಿಲ್ಲೆಯ ವಂಡಿಯೂರ್ನ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಮನಗಿರಿ ನಗರದ ಆರೋಗ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಅವರನ್ನು ಅಲ್ಲಿಂದ ಸೆ.29ರಂದು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್ಗೆ ದಾಖಲಿಸಲಾಗಿತ್ತು. ಇಲ್ಲಿ ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಮಹಿಳೆ ಮೃತಪಟ್ಟಿದ್ದರು. ಮಹಿಳೆ ಡೆಂಗ್ಯೂ ತರಹದ ರೋಗಲಕ್ಷಣಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಮಧುರೈ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿ ವಿನೋತ್ ಆಸ್ಪತ್ರೆಯ ಹೆರಿಗೆ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ಮೃತ ಗರ್ಭಿಣಿಗೆ ನೀಡಿದ ಚಿಕಿತ್ಸೆ ಕುರಿತು ವಿಚಾರಿಸಿದರು. ನಂತರ ಸೂಕ್ತ ಚಿಕಿತ್ಸೆ ನೀಡದೆ ಗರ್ಭಿಣಿಯರನ್ನು ಮುನ್ಸಿಪಲ್ ಅರ್ಬನ್ ಹೆಲ್ತ್ ಸೆಂಟರ್ನಿಂದ ಮಧುರೈನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಈ ಸಂಬಂಧ ಮಧುರೈ ಜಿಲ್ಲಾಧಿಕಾರಿ ಸಂಗೀತಾ ಅವರು ರಾಜಾಜಿ ಆಸ್ಪತ್ರೆಯಲ್ಲಿ ಸೆ.2ರಂದು ಮೃತಪಟ್ಟ ಸೆಮ್ಮಲಾರ್ ಹಾಗೂ ಕಳೆದ ತಿಂಗಳ 5ರಂದು ಮೃತಪಟ್ಟ ಇಬ್ಬರು ಗರ್ಭಿಣಿಯರ ಸಾವಿನ ಕುರಿತು ವಿಚಾರಣೆ ನಡೆಸಿದರು. ಅವರ ವಿಚಾರಣೆಯಲ್ಲಿ ಮುನ್ಸಿಪಲ್ ಅರ್ಬನ್ ಹೆಲ್ತ್ ಸೆಂಟರ್ ಗರ್ಭಿಣಿಯರಿಗೆ ಚಿಕಿತ್ಸೆ ನೀಡುವಾಗ ಮಾಡಿದ ವೈದ್ಯಕೀಯ ಪರೀಕ್ಷೆಯ ದಾಖಲೆಗಳಿಗೂ ಮತ್ತು ರಾಜಾಜಿ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ನೀಡಿದ ಮರಣೋತ್ತರ ಪರೀಕ್ಷೆಯ ವರದಿಗೂ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ.