ಔರಂಗಾಬಾದ್, ಬಿಹಾರ:ಬಿಹಾರದ ಔರಂಗಾಬಾದ್‌ನಲ್ಲಿ ಪ್ರಸಾದ ತಯಾರಿಕೆಯ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಪೊಲೀಸರೂ ಸೇರಿದಂತೆ 30 ಕ್ಕೂ ಅಧಿಕ ಜನರು ತೀವ್ರ ಗಾಯಗೊಂಡ ಘಟನೆ ಇಂದು ನಸುಕಿನ ವೇಳೆ ನಡೆದಿದೆ.
ಛತ್ ಪೂಜೆ ಹಿನ್ನೆಲೆಯಲ್ಲಿ ಭಕ್ತರಿಗಾಗಿ ಪ್ರಸಾದ ತಯಾರಿಸಲಾಗುತ್ತಿತ್ತು. ಇಂದು ಬೆಳಗಿನ ಜಾವ 3 ಗಂಟೆಗೆ ಹೊತ್ತಿನಲ್ಲಿ ಪ್ರಸಾದ ತಯಾರಿಸುವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ನಂದಿಸುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹಲವು ಕಿಮೀವರೆಗೂ ಸದ್ದು ಕೇಳಿಸಿದೆ.
ಸ್ಥಳದಲ್ಲಿ ಪ್ರಸಾದ ತಯಾರಿಸುತ್ತಿದ್ದ ಭಕ್ತರಿಗೆ ಬೆಂಕಿ ಹೊತ್ತಿಕೊಂಡು 30ಕ್ಕೂ ಅಧಿಕ ಜನರು ಸುಟ್ಟ ಗಾಯಕ್ಕೀಡಾಗಿದ್ದಾರೆ. ಭದ್ರತೆ ನೀಡುತ್ತಿದ್ದ ಪೊಲೀಸರು ಸ್ಫೋಟದ ವೇಳೆ ಗಾಯಗೊಂಡಿದ್ದಾರೆ. ಸ್ಫೋಟದಿಂದ ಜನರು ಹೆದರಿ ಅಡ್ಡಾದಿಡ್ಡಿ ಓಡಿದ್ದಾರೆ. ಇದರಿಂದ ಕಾಲ್ತುಳಿತ ಕೂಡ ಉಂಟಾಗಿದೆ.