ಮುಂಬೈ: ಲಾಲ್‌ಬಾಗ್ ಗಣೇಶ್‌ಗಲ್ಲಿಯ ಸಾರಾಭಾಯ್ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 16 ಜನರು ಗಾಯಗೊಂಡಿದ್ದಾರೆ.
ಮುಂಬೈ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟ :16 ಜನರಿಗೆ ಗಾಯ - ಸಿಲಿಂಡರ್ ಸ್ಫೋಟ ಸುದ್ದಿ
ಮುಂಬೈನ್ ಲಾಲ್‌ಬಾಗ್ ಗಣೇಶಗಲ್ಲಿಯ ಸಾರಾಭಾಯ್ ಕಟ್ಟಡದ ಎರಡನೇ ಮಹಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 16 ಜನರು ಗಾಯಗೊಂಡಿದ್ದಾರೆ..
ಸಿಲಿಂಡರ್ ಸ್ಫೋಟ
ಲಾಲ್‌ಬಾಗ್ ಗಣೇಶ್‌ಗಲ್ಲಿಯ ಐದು ಅಂತಸ್ತಿನ ಸಾರಾಭಾಯ್ ಕಟ್ಟಡದ 2ನೇ ಮಹಡಿಯಲ್ಲಿ ಇಂದು ಬೆಳಗ್ಗೆ 7:23ಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿದ್ರಿಂದ ಇದರಲ್ಲಿದ್ದ 16 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 12 ಕೆಇಎಂ ಮತ್ತು ನಾಲ್ವರು ಗಾಯಾಳುಗಳು ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಅದು ಕಟ್ಟಡವನ್ನೆಲ್ಲಾ ವ್ಯಾಪಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.