ಆಗರ್ ಮಾಲ್ವಾ(ಮಧ್ಯಪ್ರದೇಶ):ವಿದ್ಯುತ್ ತಂತಿ ತುಂಡಾಗಿ ಅಂಗಡಿ ಮೇಲೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ಸಿಲಿಂಡರ್ ಸ್ಫೋಟಗೊಂಡ ಘಟನೆ ಇಲ್ಲಿನ ನಲ್ಖೇಡಾದಲ್ಲಿ ನಡೆದಿದೆ.
cylinder blast video: ವಿದ್ಯುತ್ ತಂತಿ ತುಂಡಾಗಿ ಅಂಗಡಿಗೆ ಬೆಂಕಿ, ಸಿಲಿಂಡರ್ ಸ್ಫೋಟದ ಭೀಕರ ದೃಶ್ಯ - ಆಗರ್ ಮಾಲ್ವಾ ಸಿಲಿಂಡರ್ ಬ್ಲಾಸ್ಟ್,
ವಿದ್ಯುತ್ ತಂತಿ ತುಂಡಾಗಿ ಬಿದ್ದು ಅಂಗಡಿಗೆ ಬೆಂಕಿ ಆವರಿಸಿದ ಪರಿಣಾಮ, ಅಂಗಡಿಯೊಳಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಮಧ್ಯಪ್ರದೇಶದಲ್ಲಿ ನಡೆದ ಘಟನೆಯ ಭೀಕರ ದೃಶ್ಯ ಲಭ್ಯವಾಗಿದೆ.
![cylinder blast video: ವಿದ್ಯುತ್ ತಂತಿ ತುಂಡಾಗಿ ಅಂಗಡಿಗೆ ಬೆಂಕಿ, ಸಿಲಿಂಡರ್ ಸ್ಫೋಟದ ಭೀಕರ ದೃಶ್ಯ Cylinder Blast due to fire, Cylinder Blast due to fire in agar malwa, agar malwa Cylinder Blast, agar malwa Cylinder Blast news, ಬೆಂಕಿ ಹೊತ್ತಿ ಸಿಲಿಂಡರ್ ಬ್ಲಾಸ್ಟ್, ಆಗರ್ ಮಾಲ್ವಾದಲ್ಲಿ ಬೆಂಕಿ ಹೊತ್ತಿ ಸಿಲಿಂಡರ್ ಬ್ಲಾಸ್ಟ್, ಆಗರ್ ಮಾಲ್ವಾ ಸಿಲಿಂಡರ್ ಬ್ಲಾಸ್ಟ್, ಆಗರ್ ಮಾಲ್ವಾ ಸಿಲಿಂಡರ್ ಬ್ಲಾಸ್ಟ್ ಸುದ್ದಿ,](https://etvbharatimages.akamaized.net/etvbharat/prod-images/768-512-11926276-thumbnail-3x2-rrcc.gif)
ಅಂಗಡಿಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ್
ನಿನ್ನೆ ಮಧ್ಯಾಹ್ನದ ಹೊತ್ತಿಗೆ ಗ್ರಾಮದಲ್ಲಿ ವಿಪರೀತ ಗಾಳಿ ಬೀಸಿದ್ದು, ರಸ್ತೆ ಪಕ್ಕದಲ್ಲಿರುವ ಶಾಪ್ಗಳ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಪರಿಣಾಮ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಅಂಗಡಿಯಲ್ಲಿದ್ದ ಜನರು ಓಡಿ ಹೊರ ಬಂದಿದ್ದಾರೆ.
ಅಂಗಡಿಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ್
ಈ ವೇಳೆ ಅಂಗಡಿಯೊಂದರಲ್ಲಿದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ಭಯಾನಕ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.