ಕರ್ನಾಟಕ

karnataka

ETV Bharat / bharat

ಯಾಸ್ ಸೈಕ್ಲೋನ್.. ಜನರ ಸುರಕ್ಷತೆಗೆ ಸಹಕರಿಸಲು ಕೈ ಕಾರ್ಯಕರ್ತರಿಗೆ ರಾಹುಲ್​ ಗಾಂಧಿ ಕರೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ಯಾಸ್ ಚಂಡಮಾರುತವು ತೀವ್ರ ಸ್ವರೂಪ ಮೇ 26 ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದು ಹೋಗಲಿದೆ..

Rahul Gandhi
ರಾಹುಲ್​ ಗಾಂಧಿ

By

Published : May 25, 2021, 11:32 AM IST

ನವದೆಹಲಿ :ಯಾಸ್ ಚಂಡಮಾರುತದ ಪರಿಣಾಮ ಎದುರಿಸುವ ಜನರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ನೆರವು ನೀಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

"ಯಾಸ್ ಚಂಡಮಾರುತವು ಬಂಗಾಳಕೊಲ್ಲಿಯಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕಡೆಗೆ ಸಾಗುತ್ತಿದೆ. ಸೈಕ್ಲೋನ್ ಬಾಧಿತ ಪ್ರದೇಶಗಳ ಜನರ ಸುರಕ್ಷತೆಗಾಗಿ ಎಲ್ಲಾ ರೀತಿಯ ಸಹಾಯವನ್ನು ಒದಗಿಸುವಂತೆ ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ" ಎಂದು ಟ್ವೀಟ್​ ಮಾಡಿರುವ ರಾಹುಲ್ ಗಾಂಧಿ, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಯಾಸ್ ಚಂಡಮಾರುತ: ಸಿದ್ಧತೆಗಳ ಕುರಿತು ಸಿಎಂಗಳ ಜೊತೆ ಚರ್ಚಿಸಿದ ಅಮಿತ್ ಶಾ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ಯಾಸ್ ಚಂಡಮಾರುತವು ತೀವ್ರ ಸ್ವರೂಪ ಮೇ 26 ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದು ಹೋಗಲಿದೆ.

ನಾಳೆ ಮಧ್ಯಾಹ್ನದ ವೇಳಗೆ ಒಡಿಶಾದ ಬಾಲಸೋರ್ ಬಳಿ 155 ಕಿ.ಮೀ ನಿಂದ 165 ಕಿ.ಮೀ ವೇಗದಲ್ಲಿ ಭೂಸ್ಪರ್ಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ABOUT THE AUTHOR

...view details