ಭುವನೇಶ್ವರ:ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾದ ಕಾರಣ ಮೇ 7 ರ ಸಂಜೆಯ ವೇಳೆಗೆ ವಾಯುಭಾರ ಕುಸಿತವಾಗಿ 8ರ ವೇಳೆಗೆ ಚಂಡಮಾರುತವಾಗುವ ಸಾಧ್ಯತೆ ಇದೆ. ಮೇ 10ರ ವೇಳೆಗೆ ವಾಯುವ್ಯ ದಿಕ್ಕಿಗೆ ಚಲಿಸಿ ಉತ್ತರ ಆಂಧ್ರ-ಒಡಿಶಾ ಕರಾವಳಿಯ ಪಶ್ಚಿಮ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಡಿಶಾದ ಗಂಜಾಂ, ಖುರ್ದಾ, ಪುರಿ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚರಿಕೆ ನೀಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಶುಕ್ರವಾರ ಆಡಳಿತ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗೆ ಮುನ್ನೆಚರಿಕಾ ಕ್ರಮವಹಿಸುವಂತೆ ತಿಳಿಸಿದೆ.