ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರೂಪುಗೊಂಡಿರುವ ತೌಕ್ತೆ ಚಂಡಮಾರುತವು ಈಗಾಗಲೇ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ತನ್ನ ಆರ್ಭಟ ತೋರಿಸುತ್ತಿದ್ದು, ಗುಜರಾತ್ ರಾಜ್ಯದೆಡೆ ಸಾಗುತ್ತಿದೆ.
ಮುಂದಿನ ಆರು ಗಂಟೆಗಳಲ್ಲಿ ತೌಕ್ತೆ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ. ಪ್ರಸ್ತುತ ಸೈಕ್ಲೋನ್, ಗೋವಾದ ನೈರುತ್ಯಕ್ಕೆ 170 ಕಿ.ಮೀ ದೂರದಲ್ಲಿ, ಮುಂಬೈಗೆ 520 ಕಿ.ಮೀ ದಕ್ಷಿಣದಲ್ಲಿದೆ. ಮೇ 18ರ ಮುಂಜಾನೆ ಉತ್ತರ- ವಾಯುವ್ಯ ಮುಖವಾಗಿ ಸಾಗಿ ಗುಜರಾತ್ನ ಪೋರ್ಬಂದರ್ ಮತ್ತು ನಲಿಯಾ ಕರಾವಳಿ ದಾಟುವ ನಿರೀಕ್ಷೆಯಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಅಲೆಗಳ ಅಬ್ಬರಕ್ಕೆ ಎರಡು ಬೋಟ್ಗಳ ಮಧ್ಯೆ ಸಿಲುಕಿ ಮೀನುಗಾರ ಸಾವು
ಈಗಾಗಲೇ ಪೂರ್ವ, ಮಧ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಕೇರಳ-ಕರ್ನಾಟಕ-ಗೋವಾ-ಮಹಾರಾಷ್ಟ್ರ ತೀರಗಳಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿದ್ದರು.