ಕೊಚ್ಚಿ (ಕೇರಳ):ಕೇರಳದಲ್ಲಿ ಇಂದು ಬೆಳಗ್ಗೆಯಿಂದಲೇ ತೌಕ್ತೆ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಇಂದು ಬೆಳಗ್ಗೆನಿಂದಲೇ ತೀವ್ರ ಸ್ವರೂಪ ಪಡೆಯಲಿರುವ ಚಂಡಮಾರುತ ಭಾರತೀಯ ನೌಕಾಪಡೆ ಮಾಡಿರುವ ಟ್ವೀಟ್‌ನಲ್ಲಿ, #CycloneTauktae-ಅಪ್‌ಡೇಟ್ 1-ಡೀಪ್ ಡಿಪ್ರೆಶನ್ 240 ಎನ್‌ಎಂ ಎನ್‌ಡಬ್ಲ್ಯೂ 14ರ ಸಂಜೆ ಚಂಡಮಾರುತ ಕೊಚ್ಚಿಗೆ ಅಪ್ಪಳಿಸಿದ್ದು, 15ರ ಬೆಳಗ್ಗೆ ತೀವ್ರಗೊಳ್ಳುವ ಸಾಧ್ಯತೆಯಿದೆ" ಎಂದು ತಿಳಿಸಿದೆ.
ಇಂಡಿಯನ್ ನೇವಿ ಹಡಗುಗಳು, ವಿಮಾನಗಳು, ಹೆಲಿಕಾಪ್ಟರ್ಗಳು, ಡೈವಿಂಗ್ ಮತ್ತು ವಿಪತ್ತು ಪರಿಹಾರ ತಂಡಗಳು ಚಂಡಮಾರುತವನ್ನು ಎದುರಿಸಲು ಕರಾವಳಿ ಪ್ರದೇಶದ ರಾಜ್ಯಗಳಿಗೆ ಸಂಪೂರ್ಣ ಬೆಂಬಲ ನೀಡಲು ನಮ್ಮ ಸೈನಿಕರು ಸನ್ನದ್ಧರಾಗಿರುತ್ತಾರೆ ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ.
ಶುಕ್ರವಾರ ಲಕ್ಷದ್ವೀಪ ಮತ್ತು ಪಕ್ಕದ ಆಗ್ನೇಯ ಹಾಗೂ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೂಲಕ ಉತ್ತರ ಮತ್ತು ಈಶಾನ್ಯ ದಿಕ್ಕಿಗೆ 11 ಕಿ.ಮೀ ವೇಗದಲ್ಲಿ ತೌಕ್ತೆ ಚಂಡಮಾರುತ ಸಾಗಿತು. ಅಮಿನಿಡಿವಿಯಿಂದ ವಾಯುವ್ಯ 55 ಕಿ.ಮೀ, ಪಶ್ಚಿಮ-ನೈಋತ್ಯ 290 ಕಿ.ಮೀ ಕಣ್ಣೂರು (ಕೇರಳ) ಮುಖಾಂತರ ಆಗ್ನೇಯ 1060 ಕಿ.ಮೀ ವೆರಾವಲ್ (ಗುಜರಾತ್) ಕಡೆ ಸಾಗಲಿದೆ ಎಂದು ಶುಕ್ರವಾರ ಸಂಜೆ ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ.
ಮುಂದಿನ 12 ಗಂಟೆಗಳಲ್ಲಿ ತೌಕ್ತೆ ಪ್ರಭಾವ ತೀವ್ರಗೊಳ್ಳುವ ಸಾಧ್ಯತೆಯಿದೆ. ಅದರ ಬಳಿಕ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ತೌಕ್ತೆ ಚಂಡಮಾರುತ ಮೇ 18 ರ ಬೆಳಗ್ಗೆ ಉತ್ತರ-ವಾಯುವ್ಯ ದಿಕ್ಕಿಗೆ ತೆರಳಿ ಗುಜರಾತ್ ಕರಾವಳಿಯ ಸಮೀಪ ತಲುಪುವ ಸಾಧ್ಯತೆಯಿದೆ.
ಚಂಡಮಾರುತದ ಮುನ್ಸೂಚನೆಯ ಕುರಿತು ಕೇರಳದ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಎಚ್ಚರಿಕೆ ನೀಡಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂದಿನ ಸೂಚನೆ ಬರುವವರೆಗೂ ಕರಾವಳಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.
ಮೇ 17 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಐಎಂಡಿ ಎಚ್ಚರಿಕೆ ನೀಡಿದೆ. ಡಿಸೆಂಬರ್ 3, 2020 ರಂದು ಬುರೆವಿ ಚಂಡಮಾರುತ ಕೇರಳ ಮತ್ತು ಪಕ್ಕದ ಪ್ರದೇಶಗಳಲ್ಲಿ ಭೂಕುಸಿತವನ್ನು ಉಂಟುಮಾಡಿದನ್ನು ನೆನಪಿಸಬಹುದು.