ಕರ್ನಾಟಕ

karnataka

ETV Bharat / bharat

ತೌಕ್ತೆ ಅಬ್ಬರಕ್ಕೆ ಬಾರ್ಜ್​ನಲ್ಲಿದ್ದ 37 ಜನರ ಸಾವಿಗೆ ಕೇಂದ್ರವೇ ಹೊಣೆ: ಎನ್‌ಸಿಪಿ - ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಿದ ಎನ್‌ಸಿಪಿ ನಾಯಕ ಮಲಿಕ್

ಬಾರ್ಜ್ ಪಿ 305ನಲ್ಲಿದ್ದ 188 ನೌಕರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, 49 ಜನ ಸಾವನ್ನಪ್ಪಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ಎನ್‌ಸಿಪಿ ನಾಯಕ ಮತ್ತು ವಕ್ತಾರ ನವಾಬ್ ಮಲಿಕ್ ಈ ಘಟನೆಗೆ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ.

Malik
Malik

By

Published : May 20, 2021, 10:55 PM IST

ಮುಂಬೈ (ಮಹಾರಾಷ್ಟ್ರ):ಚಂಡಮಾರುತದಲ್ಲಿ ಸಿಲುಕಿರುವ ಬಾರ್ಜ್ ಪಿ 305ರ ಸಿಬ್ಬಂದಿಯನ್ನು ರಕ್ಷಿಸಲು ಭಾರತೀಯ ನೌಕಾಪಡೆ ತೀವ್ರ ಪ್ರಯತ್ನ ನಡೆಸುತ್ತಿದೆ. ಈವರೆಗೆ ಬಾರ್ಜ್‌ನಲ್ಲಿದ್ದ 188 ನೌಕರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ, ಈವರೆಗೆ ಈ ದುರಂತದಲ್ಲಿ 49 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.

ಪರಿಹಾರ ಕಾರ್ಯಗಳಿಗಾಗಿ ಐಎನ್ಎಸ್ ಕೊಚ್ಚಿ ಮತ್ತೊಮ್ಮೆ ಅರೇಬಿಯನ್ ಸಮುದ್ರದಲ್ಲಿದೆ. ಐಎನ್‌ಎಸ್ ಕೋಲ್ಕತಾ ಬುಧವಾರ ತಡರಾತ್ರಿ ನೇವಲ್ ಡಾಕ್‌ಗೆ ಮರಳಿದೆ. ಭಾರತೀಯ ನೌಕಾಪಡೆಗೆ ಕೋಸ್ಟ್ ಗಾರ್ಡ್ ಸಹಕರಿಸುತ್ತಿದೆ. ಅರೇಬಿಯನ್ ಸಮುದ್ರದಲ್ಲಿನ ಬಾರ್ಜ್ ಪಿ 30 ರ ಸಮೀಪದಲ್ಲಿ ಭಾರತೀಯ ನೌಕಾಪಡೆಯ ವಿಮಾನಗಳು ಮತ್ತು ಹಡಗುಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಬಾರ್ಜ್ ಪಿ 305ನಲ್ಲಿ ಸಿಲುಕಿರುವ ಕೆಲವು ಉದ್ಯೋಗಿಗಳ ಸಂಬಂಧಿಕರು ಅವರೊಂದಿಗೆ ಯಾವುದೇ ರೀತಿಯ ಸಂವಹನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ವಿಡಿಯೋಗಳ ಮೂಲಕ ಸಂಬಂಧಿಕರ ಬಗ್ಗೆ ಮಾಹಿತಿಯನ್ನು ಕೋರಿದ್ದಾರೆ. ಎಎಫ್‌ಕಾನ್ ಮತ್ತು ಒಎನ್‌ಜಿಸಿಯ ಸಹಾಯವಾಣಿಯನ್ನು ಸಂಪರ್ಕಿಸಿದ ನಂತರವೂ ಯಾವುದೇ ಮಾಹಿತಿ ಪಡೆಯಲಾಗುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ.

ಮತ್ತೊಂದೆಡೆ, ಸರಣಿ ಟ್ವೀಟ್‌ಗಳ ಮೂಲಕ ಎನ್‌ಸಿಪಿ ನಾಯಕ ಮತ್ತು ವಕ್ತಾರ ನವಾಬ್ ಮಲಿಕ್ ಈ ಘಟನೆಗೆ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ. ಅವರು ತಮ್ಮ ಟ್ವೀಟ್‌ಗಳಲ್ಲಿ, "ಪ್ರತಿಯೊಬ್ಬರಿಗೂ ತೌಕ್ತೆ ಚಂಡಮಾರುತದ ಬಗ್ಗೆ ಅರಿವು ಮೂಡಿಸಲಾಗಿತ್ತು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಎಲ್ಲರಿಗೂ ಎಚ್ಚರಿಕೆಗಳನ್ನು ಕಳುಹಿಸಲಾಗಿತ್ತು. ಸ್ಥಳೀಯ ಸರ್ಕಾರಿ ಸಂಸ್ಥೆಗಳು ಕರಾವಳಿ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ವ್ಯವಸ್ಥೆ ಮಾಡಿದ್ದವು ಮತ್ತು ಮೀನುಗಾರರಿಗೆ ಸಾಹಸ ಮಾಡದಂತೆ ಕೇಳಲಾಗಿತ್ತು. ನಂತರವೂ 600 ಮುಗ್ಧ ಕಾರ್ಮಿಕರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಲಾಗಿದೆ.

ಈ ನಿರ್ಲಕ್ಷ್ಯದಿಂದಾಗಿ 60 ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿವೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರಿಯಾದ ಸಮಯದಲ್ಲಿ ಸ್ಥಳಾಂತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿಲ್ಲ. ಇದಕ್ಕೆ ಹೊಣೆಗಾರರನ್ನು ಶಿಕ್ಷಿಸಬೇಕು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವೂ ಉತ್ತರಿಸಬೇಕು." ಎಂದು ಬರೆದಿದ್ದಾರೆ.

For All Latest Updates

ABOUT THE AUTHOR

...view details