ಮುಂಬೈ:ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬಿ ಸಮುದ್ರದಲ್ಲಿ ಬೋಟ್ಗಳು ಕೊಚ್ಚಿ ಹೋಗಿದ್ದು, ಹರಸಾಹಸ ಮಾಡಿ ಅದರಲ್ಲಿದ್ದ 146 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
ಸಮುದ್ರದಲ್ಲಿ ಸಿಲುಕಿದ್ದ 46 ಮಂದಿಯ ರಕ್ಷಿಸಿದ ನೌಕಾಪಡೆ ನಿನ್ನೆ ಮುಂಬೈ ಕರಾವಳಿ ಹಾದು ಗುಜರಾತ್ಗೆ ಸೈಕ್ಲೋನ್ ಅಪ್ಪಳಿಸುವ ವೇಳೆ ಒಟ್ಟು 410 ಜನರಿದ್ದ ಮಾನವ-ಸರಕು ಸಾಗಣೆಯ ಎರಡು ಬೋಟ್ಗಳು ಕೊಚ್ಚಿ ಹೋಗಿತ್ತು. ಸಮುದ್ರದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ನೌಕಾಪಡೆಯು ತನ್ನ ಮೂರು ಯುದ್ಧನೌಕೆಗಳನ್ನು ನಿಯೋಜಿಸಿತ್ತು.
ಇದನ್ನೂ ಓದಿ: ಉಡುಪಿ: 40 ಗಂಟೆಯಿಂದ ಸಮುದ್ರದಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ
ರಾತ್ರಿಯಿಡೀ ಬಲವಾದ ಗಾಳಿ-ಮಳೆ, ಸಮುದ್ರದ ಅಲೆಗಳ ತೀವ್ರ ಏರಿಳಿತದೊಂದಿಗೆ ಕಾರ್ಯಾಚರಣೆ ನಡೆಸಿದ ನೌಕಾಪಡೆ ಸಿಬ್ಬಂದಿ P305 ಬೋಟ್ನಲ್ಲಿದ್ದ 273 ಜನರ ಪೈಕಿ 132 ಮಂದಿ ಹಾಗೂ ಗಾಲ್ ಕನ್ಸ್ಟ್ರಕ್ಟರ್ ಎಂಬ ಬೋಟ್ನಲ್ಲಿದ್ದ 137 ಜನರ ಪೈಕಿ 14 ಮಂದಿ ಸೇರಿ ಒಟ್ಟು 146 ಜನರನ್ನು ರಕ್ಷಿಸಿದ್ದಾರೆ. ಉಳಿದವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.