- ನಿವಾರ್ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆ
- ಸುರಕ್ಷಿತವಲ್ಲದ ಕಟ್ಟಡಗಳು ಮತ್ತು ತಗ್ಗು ಪ್ರದೇಶದ ಜನರ ಸ್ಥಳಾಂತರ
- 3,948 ಮಕ್ಕಳ ಸಹಿತ 24,166 ಜನರ ಸ್ಥಳಾಂತರ
- 987 ಪರಿಹಾರ ಕೇಂದ್ರಗಳಿಗೆ ತಗ್ಗು ಪ್ರದೇಶದ ನಿವಾಸಿಗಳು ಶಿಫ್ಟ್
- ಒಟ್ಟು 4,733 ಪರಿಹಾರ ಕೇಂದ್ರಗಳಲ್ಲಿ 13 ಲಕ್ಷ ಜನರಿಗೆ ಆಶ್ರಯದ ವ್ಯವಸ್ಥೆ
ಸೈಕ್ಲೋನ್ ನಿವಾರ್ ಲೈವ್ ಅಪ್ಡೇಟ್: ತಮಿಳುನಾಡಿನಲ್ಲಿ 24,166 ಜನರ ಸ್ಥಳಾಂತರ! - ಸೈಕ್ಲೋನ್ ನಿವಾರ್ 2020 ಸುದ್ದಿ
ಸೈಕ್ಲೋನ್ ನಿವಾರ್
12:52 November 25
13 ಲಕ್ಷ ಜನರಿಗೆ ಆಶ್ರಯದ ವ್ಯವಸ್ಥೆ
12:40 November 25
ನಿವಾರ್ ಚಂಡಮಾರುತದ ಭೀತಿ
- ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ ಭೀತಿ
- ಚೆಂಗಲ್ಪೇಟ್ ಜಿಲ್ಲೆಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ಜನರ ಸ್ಥಳಾಂತರ
- 654 ಮಕ್ಕಳು ಸೇರಿ 1,800 ಮಂದಿ 48 ಪರಿಹಾರ ಶಿಬಿರಗಳಿಗೆ ಶಿಫ್ಟ್
- ಮಮಲ್ಲಾಪುರಂ ಕರಾವಳಿಯಲ್ಲಿ ಭಾರೀ ವೇಗದಲ್ಲಿ ಬೀಸುತ್ತಿರುವ ಗಾಳಿ
10:28 November 25
ಚೆನ್ನೈನಲ್ಲಿ ಭಾರೀ ಮಳೆ
- ನಿವಾರ್ ಚಂಡಮಾರುತದ ಪರಿಣಾಮ ಚೆನ್ನೈನಲ್ಲಿ ಭಾರೀ ಮಳೆ
- ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು
- ಭಾರಿ ಮಳೆಯಿಂದಾಗಿ ಚೆನ್ನೈನಲ್ಲಿ ಜನರ ಪರದಾಟ
10:28 November 25
ತಗ್ಗು ಪ್ರದೇಶಗಳಿಂದ ಜನರ ಶಿಫ್ಟ್
- ಪುದುಚೇರಿಯ ತಗ್ಗು ಪ್ರದೇಶಗಳಿಂದ ಜನರ ಶಿಫ್ಟ್
- ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
- ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ
- 'ನಿವಾರ್' ಎದುರಿಸಲು ಸಿದ್ಧವಾಗಿದ್ದೇವೆ ಎಂದ ಪುದುಚೇರಿ ಸಿಎಂ ವಿ. ನಾರಾಯಣ ಸ್ವಾಮಿ
08:37 November 25
ಭಾರೀ ಮಳೆ
- ತಮಿಳುನಾಡಿನ ಚೆನ್ನೈ ಮತ್ತು ಕಾಂಚಿಪುರಂನಲ್ಲಿ ಭಾರೀ ಮಳೆ
- ನಿನ್ನೆ ರಾತ್ರಿ 8:30ರಿಂದ ಚೆನ್ನೈ/ಮೀನಾಂಬಕ್ಕಮ್ನಲ್ಲಿ 120 ಮಿ.ಮೀ. ಮಳೆ
- 120 ರಿಂದ 125 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ ಚಂಡಮಾರುತ
- ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಕೇರಳದಲ್ಲಿ ಎನ್ಡಿಆರ್ಎಫ್ ತಂಡಗಳು ಸನ್ನದ್ಧ
08:32 November 25
ಉಗ್ರ ಸ್ವರೂಪ ತಾಳಿದ ಸಮುದ್ರ
- ಪುದುಚೇರಿಯಲ್ಲಿ ಉಗ್ರ ಸ್ವರೂಪ ತಾಳಿದ ಸಮುದ್ರ
- ಪುದುಚೇರಿಯಲ್ಲಿ ಸಮುದ್ರ ದಡಕ್ಕೆ ಅಪ್ಪಳಿಸುತ್ತಿವೆ ಭಾರೀ ಗಾತ್ರದ ಅಲೆಗಳು
- ಕಾರೈಕಲ್ ಮತ್ತು ಮಮಲ್ಲಾಪುರಮ್ ಕರಾವಳಿ ಮೂಲಕ ಹಾದು ಹೋಗಲಿದೆ 'ನಿವಾರ್'
08:21 November 25
ಪೂರ್ವ ಕರಾವಳಿಯಲ್ಲಿ ನಿವಾರ್ ಚಂಡಮಾರುತದ ಆತಂಕ
- ಪೂರ್ವ ಕರಾವಳಿಯಲ್ಲಿ ನಿವಾರ್ ಚಂಡಮಾರುತದ ಆತಂಕ
- ಚಂಡಮಾರುತ ಸ್ವರೂಪ ಪಡೆದ ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ
- ಇಂದು ಸಂಜೆ ವೇಳೆಗೆ ಚೆನ್ನೈ, ಪುದುಚೇರಿಗೆ ಅಪ್ಪಳಿಸುವ ಸಾಧ್ಯತೆ
- ತಮಿಳುನಾಡು, ಪುದುಚೇರಿಯ ಹಲವೆಡೆ ಭಾರೀ ಮಳೆ
Last Updated : Nov 25, 2020, 1:04 PM IST