ಕರ್ನಾಟಕ

karnataka

ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸಲಿದೆ 'ಮೋಚಾ' ಚಂಡಮಾರುತ: ಹವಾಮಾನ ಇಲಾಖೆ ಮುನ್ಸೂಚನೆ

By

Published : May 6, 2023, 8:02 PM IST

ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಭಾರೀ ಬಿರುಗಾಳಿ ಬೀಸುತ್ತಿದ್ದು, ಮುಂಬರುವ ದಿನಗಳಲ್ಲಿ ಮೋಚಾ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Cyclone Mocha
ಮೋಚಾ ಚಂಡಮಾರುತ

ನವದೆಹಲಿ:ಮುಂಬರುವ ದಿನಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ 'ಮೋಚಾ' ಚಂಡಮಾರುತದ ಅಬ್ಬರ ಜೋರಾಗಲಿದೆ. ಮುಂದಿನ ವಾರದಲ್ಲಿ ಈ ಪ್ರದೇಶದಲ್ಲಿ ಮೋಚಾ ಚಂಡಮಾರುತ ಪರಿಣಾಮ ತೀವ್ರವಾಗಲಿದ್ದು, ಇದು ಚಂಡಮಾರತದ ಮೊದಲ ಹೆಜ್ಜೆ ಆಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಘಟಿಕೋತ್ಸವದ ಭಾಷಣದ ವೇಳೆ ಪವರ್​ ಕಟ್​..!

ಮೇ 8ರ ವೇಳೆಗೆ ಚಂಡಮಾರುತದ ಪ್ರಭಾವ ತೀವ್ರ:"ಚಂಡಮಾರುತದ ಪರಿಚಲನೆಯು ಆಗ್ನೇಯ ಬಂಗಾಳಕೊಲ್ಲಿ ಮತ್ತು ನೆರೆಹೊರೆಯಲ್ಲಿ ಕೆಳ ಮತ್ತು ಮಧ್ಯಮ ವಾಯುಮಂಡಲದ ಮಟ್ಟದಲ್ಲಿ ಕಂಡುಬರಲಿದೆ. ಚಂಡಮಾರುತದ ಪ್ರಭಾವವು ಮೇ 8ರ ವೇಳೆಗೆ ಆಯಾ ಪ್ರದೇಶಗಳಲ್ಲಿ ಕಡಿಮೆ ಒತ್ತಡ ರೂಪುಗೊಳ್ಳುವ ಸಾಧ್ಯತೆಯಿದೆ" ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮೂನ್ಸೂಚನೆ ನೀಡಿದರು.

ಇದನ್ನೂ ಓದಿ:ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದರೆ ಪಾಕ್​ ವಿದೇಶಾಂಗ ಸಚಿವ ಭಾರತ ಪ್ರವಾಸ ಭಾರತೀಯರಿಗೆ ಕೋಪ ತರಿಸಿದೆ: ಅರವಿಂದ್ ಕೇಜ್ರಿವಾಲ್

ಮೇ 9ಕ್ಕೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ''ಕಡಿಮೆ ಒತ್ತಡದ ಪ್ರದೇಶ ರಚನೆಯಾದ ನಂತರ ಮಾರ್ಗ ಹಾಗೂ ತೀವ್ರತೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಲಾಗುವುದು. ಮೇ 9ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ಕೇಂದ್ರೀಕೃತವಾಗಿದೆ. ಈ ಸಮಯದಲ್ಲಿ ಚಂಡಮಾರುತ ತೀವ್ರಗೊಳ್ಳುತ್ತದೆ. ಮಧ್ಯ ಬಂಗಾಳ ಕೊಲ್ಲಿಯತ್ತ ಸುಮಾರು ಉತ್ತರಕ್ಕೆ ಚಲಿಸುವ ಸಾಧ್ಯತೆಯಿದೆ. 500 ವರ್ಷಗಳ ಹಿಂದೆ ಜಗತ್ತಿಗೆ ಕಾಫಿಯನ್ನು ಪರಿಚಯಿಸಿದ ಕೆಂಪು ಸಮುದ್ರದ ಬಂದರು ನಗರ ಯೆಮೆನ್ ಸೂಚಿಸಿದ ಹೆಸರನ್ನು ಚಂಡಮಾರುತಕ್ಕೆ ಮೋಚಾ ಎಂದು ಹೆಸರಿಸಲಾಗಿದೆ'' ಎಂದು ಮೊಹಾಪಾತ್ರ ಮಾಹಿತಿ ನೀಡಿದರು.

ಇದನ್ನೂ ಓದಿ:ಯಾತ್ರಾರ್ಥಿಗಳ ಕಾರು ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

ಗಂಟೆಗೆ ಗಾಳಿಯ ವೇಗ 40ರಿಂದ 50 ಕಿ.ಮೀ. ತಲುಪುವ ಸಾಧ್ಯತೆ:''ಭಾನುವಾರದಿಂದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಗಾಳಿಯ ವೇಗ ಗಂಟೆಗೆ 40ರಿಂದ 50 ಕಿ.ಮೀ. ತಲುಪುವ ಸಾಧ್ಯತೆಯಿದೆ'' ಎಂದು ಹವಾಮಾನ ಇಲಾಖೆಯು ಮೀನುಗಾರರಿಗೆ ಎಚ್ಚರಿಕೆ ನೀಡಿದೆ. "ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಇರುವವರು ಮೇ 7ರ ಮೊದಲು ಸುರಕ್ಷಿತ ಸ್ಥಳಗಳಿಗೆ ಮರಳಲು ಸೂಚಿಸಲಾಗಿದೆ. ಮಧ್ಯ ಬಂಗಾಳ ಕೊಲ್ಲಿಯ ಮೇಲಿರುವವರು ಮೇ 9ರ ಮೊದಲು ಹಿಂತಿರುಗಲು ಸೂಚನೆ ನೀಡಲಾಗಿದೆ" ಎಂದು ಹವಾಮಾನ ಇಲಾಖೆ ಕಚೇರಿ ತಿಳಿಸಿದೆ.

ಇದನ್ನೂ ಓದಿ:ಚಿತ್ರಮಂದಿರದಲ್ಲಿ ಮಹಿಳೆಗೆ ಕಚ್ಚಿದ ಇಲಿ; 67 ಸಾವಿರ ರೂ. ಪರಿಹಾರ ನೀಡುವಂತೆ ಗ್ರಾಹಕರ ಆಯೋಗ ಆದೇಶ

ಕಡಲಾಚೆಯ ಚಟುವಟಿಕೆಗಳ ನಿಯಂತ್ರಣ:ಪ್ರವಾಸೋದ್ಯಮ ಮತ್ತು ಕಡಲಾಚೆಯ ಚಟುವಟಿಕೆಗಳ ನಿಯಂತ್ರಣ ಮತ್ತು ಮೇ 8 ಮತ್ತು 12ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಸಾಗಣೆಯ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಮಧುರೈ ಕಲ್ಲಜಗರ್ ದೇವರ ಚಿತ್ತಿರೈ ಉತ್ಸವದಲ್ಲಿ ಕಾಲ್ತುಳಿತ: ಐವರ ಸಾವು

ABOUT THE AUTHOR

...view details