ಕರ್ನಾಟಕ

karnataka

ETV Bharat / bharat

ಸೈಕ್ಲೋನ್.. ಕೇರಳಿಗರು ಎಚ್ಚರಿಕೆಯಿಂದಿರುವಂತೆ ಐಎಂಡಿ ಸೂಚನೆ

ಡಿಸೆಂಬರ್​​ 3ರಂದು ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಇದು ಡಿಸೆಂಬರ್ 2ರ ಸಂಜೆ/ರಾತ್ರಿಯ ಸಮಯದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿಗೆ ತೆರಳಿ ಶ್ರೀಲಂಕಾ ಕರಾವಳಿಯನ್ನು ಬಾಧಿಸಲಿದೆ..

IMD asks people of southern Kerala to remain vigilant
ದಕ್ಷಿಣ ಕೇರಳದ

By

Published : Dec 1, 2020, 1:06 PM IST

ತಿರುವನಂತಪುರಂ :ಬೇ ಆಫ್​ ಬೆಂಗಾಲ್​ನಲ್ಲಿ ವಾಯುಭಾರ ಕುಸಿತದಿಂದಾಗಿ ತಮಿಳುನಾಡು ಹಾಗೂ ಕೇರಳದ ದಕ್ಷಿಣ ಭಾಗದಲ್ಲಿ ಮತ್ತೆ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ದಕ್ಷಿಣ ತಮಿಳುನಾಡು ಮತ್ತು ಕೇರಳದ ದಕ್ಷಿಣ ಭಾಗಗಳಲ್ಲಿ ನವೆಂಬರ್ 30ರಂದು ರಾತ್ರಿ 11:30ಕ್ಕೆ ಸರಿ ಸುಮಾರು 590 ಕಿ.ಮೀ ವೇಗದಲ್ಲಿ ಚಂಡಮಾರುತ ಉಂಟಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಹೇಳಿದೆ.

ನಂತರದ 12 ಗಂಟೆಗಳಲ್ಲಿ ಈ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಪೂರ್ವ ಆಗ್ನೇಯಕ್ಕೆ 590 ಕಿ.ಮೀ ಮತ್ತು ಕನ್ಯಾಕುಮಾರಿ (ಭಾರತ)ದಿಂದ ಪೂರ್ವಕ್ಕೆ 1000 ಕಿ.ಮೀ ದೂರದಲ್ಲಿ ಚಂಡ ಮಾರುತ ಉಂಟಾಗಲಿದೆ.

ಡಿಸೆಂಬರ್​​ 3ರಂದು ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಇದು ಡಿಸೆಂಬರ್ 2ರ ಸಂಜೆ/ರಾತ್ರಿಯ ಸಮಯದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿಗೆ ತೆರಳಿ ಶ್ರೀಲಂಕಾ ಕರಾವಳಿಯನ್ನು ಬಾಧಿಸಲಿದೆ.

ನಂತರ ಪಶ್ಚಿಮ ದಿಕ್ಕಿಗೆ ಚಲಿಸುವಂತಿದ್ದು, ಡಿಸೆಂಬರ್ 3ರಂದು ಕೊಮೊರಿನ್ ಪ್ರದೇಶಕ್ಕೆ ಲಗ್ಗೆ ಇಡಲಿದೆ. ನಂತರ ಬೆಳಗ್ಗೆ ದಕ್ಷಿಣ ತಮಿಳುನಾಡು ಕರಾವಳಿಯ ಕಡೆಗೆ ಬೀಸಲಿದೆ ಎಂದು ಐಎಂಡಿ ಹೇಳಿದೆ.

ABOUT THE AUTHOR

...view details