ಮುಂಬೈ(ಮಹಾರಾಷ್ಟ್ರ):ಸೈಬರ್ ಭಯೋತ್ಪಾದನೆ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅನೀಸ್ ಶಕೀಲ್ ಅನ್ಸಾರಿ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ ಮುಂಬೈ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಸಾಫ್ಟವೇರ್ ಎಂಜಿನಿಯರ್ ಆಗಿದ್ದ ಅನೀಸ್ನನ್ನು 2014 ರಲ್ಲಿ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ಆಗಿನಿಂದಲೂ ಈತ ನ್ಯಾಯಾಂಗ ಬಂಧನದಲ್ಲಿದ್ದ.
2014ರಲ್ಲಿ ಅಮೆರಿಕದ ಶಾಲೆಯೊಂದರ ಮೇಲೆ ಆತ್ಮಾಹುತಿ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿ ಅನಿಸ್ ಶಕೀಲ್ ಅನ್ಸಾರಿಯನ್ನು ಎಟಿಎಸ್ ಬಂಧಿಸಿತ್ತು. ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ 115, 120 (ಬಿ) ಸೆಕ್ಷನ್ 43 (ಎ), 66 (ಎಫ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.