ನವದೆಹಲಿ : ದೇಶದ ಭದ್ರತೆಯಲ್ಲಿ ಸೈಬರ್ ಭದ್ರತೆಯೂ ಒಂದು ಅವಿಭಾಜ್ಯ ಅಂಗವಾಗಿದೆ. ರಕ್ಷಣಾ ವಲಯವು ಮಾಹಿತಿ ತಂತ್ರಜ್ಞಾನದಲ್ಲಿ ಭಾರತದ ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
'ಆತ್ಮನಿರ್ಭರ್ತ ಇನ್ ಡಿಫೆನ್ಸ್-ಕಾಲ್ ಟು ಆ್ಯಕ್ಷನ್' ಎಂಬ ವೆಬ್ನಾರ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸೈಬರ್ ಭದ್ರತೆಯು "ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ" ಎಂದು ಹೇಳಿದ್ದಾರೆ.
ಭಾರತದ ಐಟಿ ಕ್ಷೇತ್ರವು ನಮ್ಮ ದೊಡ್ಡ ಶಕ್ತಿಯಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ನಾವು ಈ ಶಕ್ತಿಯನ್ನು ಎಷ್ಟು ಹೆಚ್ಚು ಬಳಸುತ್ತೇವೆ, ಅಷ್ಟು ಭದ್ರತೆಯಲ್ಲಿ ನಾವು ಹೆಚ್ಚು ವಿಶ್ವಾಸ ಹೊಂದುತ್ತೇವೆ ಎಂದು ಪ್ರಧಾನಿ ಹೇಳಿದರು.
ಕಳೆದ 5-6 ವರ್ಷಗಳಲ್ಲಿ ನಾವು ರಕ್ಷಣಾ ರಫ್ತನ್ನು ಆರು ಪಟ್ಟು ಹೆಚ್ಚಿಸಿದ್ದೇವೆ. ಇಂದು ನಾವು 75ಕ್ಕೂ ಹೆಚ್ಚು ದೇಶಗಳಿಗೆ 'ಮೇಡ್ ಇನ್ ಇಂಡಿಯಾ' ರಕ್ಷಣಾ ಉಪಕರಣಗಳು ಮತ್ತು ಸೇವೆಗಳನ್ನು ಒದಗಿಸುತ್ತಿದ್ದೇವೆ. ಕಳೆದ ವರ್ಷ ಏಳು ಹೊಸ ರಕ್ಷಣಾ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.