ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಆನ್ಲೈನ್ ವಂಚನೆಗೆ ಒಳಗಾಗಿದ್ದು, ಸುಮಾರು 1.14 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಮತ್ತೆ ಆ ಹಣ ವಾಪಸ್ ಪಡೆದುಕೊಂಡಿದ್ದಾರೆ. ವಂಚಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಮ್ಮ ಬ್ಯಾಂಕ್ನ ಕೆವೈಸಿ (Know Your Customer) ಮಾಹಿತಿಯನ್ನು ನವೀಕರಣ ಮಾಡುವಂತೆ ವ್ಯಕ್ತಿಯೋರ್ವ ಬ್ಯಾಂಕ್ ಸಿಬ್ಬಂದಿಯೆಂದು ಹೇಳಿಕೊಂಡು ವಿನೋದ್ ಕಾಂಬ್ಳಿಗೆ ಕರೆ ಮಾಡಿದ್ದಾನೆ. ಕೆವೈಸಿ ನವೀಕರಣ ಮಾಡದಿದ್ದರೆ, ಬ್ಯಾಂಕ್ನ ಕಾರ್ಡ್ ನಿಷ್ಕ್ರಿಯವಾಗುತ್ತದೆ ಎಂದು ಕೂಡಾ ಆತ ಹೇಳಿದ್ದ.
ಬ್ಯಾಂಕ್ನ ಮಾಹಿತಿಗಳನ್ನು ಹಂಚಿಕೊಂಡರೆ ಕೆವೈಸಿ ನವೀಕರಣ ಮಾಡಲಾಗುತ್ತದೆ ಎಂದು ಆತ ಹೇಳಿದಾಗ ವಿನೋದ್ ಕಾಂಬ್ಳಿ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ ಕಾಂಬ್ಳಿ ಮೊಬೈಲ್ಗೆ ಲಿಂಕ್ ಕಳಿಸಿದ ಆತ, ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡುವಂತೆ ಸೂಚಿಸಿದ್ದಾನೆ.