ಹೈದರಾಬಾದ್: ಆನ್ಲೈನ್ ಡೇಟಿಂಗ್ ಆ್ಯಪ್ಗಳ ಮೂಲಕ ಈಗಾಗಲೇ ಸಾವಿರಾರು ಜನರು ಮೋಸ ಹೋಗಿದ್ದು, ಸದ್ಯ ತೆಲಂಗಾಣದಲ್ಲೂ ಅಂತಹದೊಂದು ಘಟನೆ ನಡೆದಿದೆ. ಆನ್ಲೈನ್ ಡೇಟಿಂಗ್ ಜಾಲದಲ್ಲಿ ಸಿಲುಕಿಕೊಂಡಿರುವ 77 ವರ್ಷದ ವೃದ್ಧನೋರ್ವ ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.
77 ವರ್ಷದ ವೃದ್ಧನೋರ್ವ ರಹಸ್ಯವಾಗಿ ಆನ್ಲೈನ್ನಲ್ಲಿ ಚಾಟ್ ಮಾಡಿದ್ದು, ಅದರ ಸದುಪಯೋಗ ಪಡೆದುಕೊಂಡಿರುವ ದುಷ್ಕರ್ಮಿಗಳು ಇಷ್ಟೊಂದು ಹಣ ವಂಚನೆ ಮಾಡಿದ್ದಾರೆ. ಹುಡುಗಿ ಹೆಸರಿನಲ್ಲಿ ಡೇಟಿಂಗ್ ಆ್ಯಪ್ ಓಪನ್ ಮಾಡಿದ್ದು, ಪ್ರತಿದಿನ ಚಾಟ್ ಮಾಡಿದ್ದಾರೆ. ಈ ವೇಳೆ ವೃದ್ಧ ಹುಡುಗಿ ಎಂದು ನಂಬಿರುವ ಆತ ಮೋಸ ಹೋಗಿದ್ದಾನೆ.