ಕರ್ನಾಟಕ

karnataka

ETV Bharat / bharat

ನೀವೂ ಎಚ್ಚರ: 'ಕೋವಿಡ್ ಎಮರ್ಜೆನ್ಸಿ​' ಹೆಸರಿನಲ್ಲಿ 23 ಲಕ್ಷ ರೂ. ಲಪಟಾಯಿಸಿದ ಭೂಪ - ಮೇಲ್ ಹ್ಯಾಕ್ ಮಾಡಿ ಹಣ ಲೂಟಿ

ಸೈಬರ್​ ಹ್ಯಾಕರ್ಸ್ ಕ್ರಿಮಿನಲ್ ಟೆಕ್ನಿಕ್ ಮೂಲಕ ಜನರ ಖಾತೆಗಳಿಗೆ ಕನ್ನ ಹಾಕುತ್ತಿದ್ದು, ಸದ್ಯ ಅಂತಹದೊಂದು ಘಟನೆ ತೆಲಂಗಾಣದಲ್ಲಿ ನಡೆದಿದೆ.​​

CYBER CRIMINALS
CYBER CRIMINALS

By

Published : May 13, 2021, 4:24 PM IST

ಹೈದರಾಬಾದ್​:ದೇಶದಲ್ಲಿ ಹೊಸ ಹೊಸ ಸೈಬರ್ ಪ್ರಕರಣ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದು, ಸದ್ಯ ಅಂತಹ ಮತ್ತೊಂದು ಘಟನೆ ಇದೀಗ ಹೈದರಾಬಾದ್​ನಲ್ಲಿ ನಡೆದಿದೆ.

ಸಬರ್​ ಅಪರಾಧಿಗಳು ಕೋವಿಡ್ ತುರ್ತು ಹೆಸರಿನಲ್ಲಿ ಇದೀಗ ಮೋಸ ಮಾಡಲು ಮುಂದಾಗಿದ್ದಾರೆ. ವ್ಯಕ್ತಿಯೋರ್ವನ ಮೇಲ್ ಹ್ಯಾಕ್ ಮಾಡಿ ಆತನ ಖಾತೆಗಳಿಂದ ಲಕ್ಷಾಂತರ ರೂ ದೋಚಿದ್ದಾರೆ.

ಏನಿದು ಘಟನೆ?

ಹೈದರಾಬಾದ್​ನ ಉದ್ಯಮಿ ವೀರೇಂದ್ರ ಬಂಡಾರಿ ಹೆಸರಿನಲ್ಲಿ ನಕಲಿ ಇ-ಮೇಲ್ ರಚನೆ ಮಾಡಿದ್ದಾರೆ. ಜತೆಗೆ ಉದ್ಯಮಿ ಬಂಡಾರಿ ಆಸ್ಪತ್ರೆಯಲ್ಲಿ ಕೋವಿಡ್​ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆಂದು ಆತನ ಹೆಸರಿನಲ್ಲಿ ಬ್ಯಾಂಕ್​ಗೆ ಮೇಲ್ ಮಾಡಿದ್ದಾನೆ. ವೈದ್ಯಕೀಯ ವೆಚ್ಚಗಳಿಗಾಗಿ 23 ಲಕ್ಷದ 60 ಸಾವಿರ ರೂ. ವರ್ಗಾವಣೆ ಮಾಡುವಂತೆ ವಿನಂತಿ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ತಕ್ಷಣವೇ ಆತ ಹೇಳಿರುವ ಮೂರು ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ: ಯೂಟ್ಯೂಬರ್‌ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 23 ಲಕ್ಷ ರೂ. ಲಪಟಾಯಿಸಿದ ಖದೀಮ ಬಂಧನ

ವೀರೇಂದ್ರ ಬಂಡಾರಿ ಸಂಜೆ ಖಾತೆ ಪರಿಶೀಲನೆ ನಡೆಸಿದಾಗ ಈ ಮಾಹಿತಿ ಬಹಿರಂಗಗೊಂಡಿದೆ. ಈ ವೇಳೆ ಸೈಬರ್​ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಹಿಂದೆ ಕೂಡ ವ್ಯಕ್ತಿಯೊಬ್ಬ ಇದೇ ರೀತಿ ಮೋಸ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಎರಡು ಪ್ರಕರಣಗಳ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮುಂಬೈನಲ್ಲೂ ಯೂಟ್ಯೂಬರ್​ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 23.5 ಲಕ್ಷ ರೂ. ಬೇರೆಡೆಬಗೆ ವರ್ಗಾಯಿಸಿದ ಪ್ರಕರಣ ನಡೆದಿತ್ತು. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿ ಬಂಧನ ಮಾಡಲಾಗಿದೆ.

ABOUT THE AUTHOR

...view details