ಕರ್ನಾಟಕ

karnataka

ETV Bharat / bharat

2020ರಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ 144 ಸೈಬರ್‌ ಅಪರಾಧ ಪ್ರಕರಣಗಳು ದಾಖಲು: ಎನ್‌ಸಿಆರ್‌ಬಿ ವರದಿ - ಮಕ್ಕಳ ಮೇಲಿನ ಸೈಬರ್‌ ಅಪರಾಧ

2020ರಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ 144 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು ಹಿಂದೆಂದಿಗಿಂತಲೂ ಅಧಿಕವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ.

cyber crime against children in karnataka
2020ರಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ 144 ಸೈಬರ್‌ ಅಪರಾಧ ಪ್ರಕರಣಗಳು ದಾಖಲು: ಎನ್‌ಸಿಆರ್‌ಬಿ ವರದಿ

By

Published : Sep 17, 2021, 2:22 PM IST

ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಮಕ್ಕಳ ಮೇಲಿನ 144 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅಧಿಕ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ - ಎನ್‌ಸಿಆರ್‌ಬಿ ಮಾಹಿತಿ ಮಾಡಿದೆ.

2020ರಲ್ಲಿ ಸೈಬರ್ ಪೋರ್ನೋಗ್ರಫಿ, ಅಶ್ಲೀಲ ವಸ್ತುಗಳನ್ನು ಪ್ರಕಟಿಸಿದ ಆರೋಪದಲ್ಲಿ 122 ಪ್ರಕರಣಗಳು ದಾಖಲಾಗಿದ್ದರೆ, ಮಕ್ಕಳ ವಿರುದ್ಧದ ಇತರೆ 11 ಸೈಬರ್‌ ಅಪರಾಧಗಳು ಸೇರಿ ಒಟ್ಟು 144 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 10, 2018ರಲ್ಲಿ 25 ಹಾಗೂ 2017ರಲ್ಲಿ ಇಂತಹ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ.

ಸೈಬರ್‌ ಕ್ರೈಮ್‌ ಎಂದರೇನು?

ಕಂಪ್ಯೂಟರ್ ಅಥವಾ ಇತರ ಯಾವುದೇ ತಾಂತ್ರಿಕ ಸಲಕರಣೆಗಳ ಮೂಲಕ ಮಾಡುವ ಅಪರಾಧ ಚಟುವಟಿಕೆಗಳು ಸೈಬರ್ ಅಪರಾಧದ ವ್ಯಾಪ್ತಿಯಲ್ಲಿ ಬರುತ್ತದೆ. ಸೈಬರ್ - ಅಪರಾಧ ಎಂಬ ಪದವನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಅಡಿ ವ್ಯಾಖ್ಯಾನಿಸಲಾಗಿಲ್ಲ. ಆದರೆ, ಸರಳವಾಗಿ ಹೇಳುವುದಾದರೆ ಸೈಬರ್ ಅಪರಾಧವು ಕಾನೂನುಬಾಹಿರ ಕೃತ್ಯಗಳಾಗಿವೆ.

ಇದರಲ್ಲಿ ಕಂಪ್ಯೂಟರ್ ಒಂದು ಸಾಧನವಾಗಿರುತ್ತದೆ. ಇದನ್ನು ಕಂಪ್ಯೂಟರ್ ಅಪರಾಧ, ಇ - ಅಪರಾಧ ಹಾಗೂ ಎಲೆಕ್ಟ್ರಾನಿಕ್ ಅಪರಾಧ ಅಂತಲೂ ಕರೆಯಲಾಗುತ್ತದೆ.

ವಿವಿಧ ರೀತಿಯ ಸೈಬರ್ ಅಪರಾಧಗಳು?

ಸೈಬರ್ ಅಪರಾಧಗಳನ್ನು 3 ಪ್ರಮುಖ ವರ್ಗಗಳಾಗಿ ವರ್ಗೀಕರಿಸಬಹುದು.

ಎ) ಸೈಬರ್ ಭಯೋತ್ಪಾದನೆಯಂತಹ ಸರ್ಕಾರದ ವಿರುದ್ಧದ ಅಪರಾಧ

b) ಸೈಬರ್ ಅಶ್ಲೀಲತೆ, ಸೈಬರ್ ಸ್ಟಾಕಿಂಗ್, ವ್ಯಕ್ತಿಗಳ ವಿರುದ್ಧದ ಸೈಬರ್ ಮಾನಹಾನಿ etc

ಸಿ) ಆನ್‌ಲೈನ್ ಜೂಜು, ಬೌದ್ಧಿಕ ಆಸ್ತಿಗಳ ಉಲ್ಲಂಘನೆ, ಕ್ರೆಡಿಟ್ ಕಾರ್ಡ್ ವಂಚನೆಗಳಂತಹ ಅಪರಾಧ

ಬೆಂಗಳೂರಿನಲ್ಲೇ ಅತಿಹೆಚ್ಚು ಸೈಬರ್ ಅಪರಾಧ ಪ್ರಕರಣಗಳು

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2020 ರ ದತ್ತಾಂಶವು ದೇಶದ 19 ಮೆಟ್ರೋ ನಗರಗಳಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂದು ಹೇಳಿದೆ. 2020ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳೂ ನಡೆದಿವೆ.

ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ದಾಖಲಾದ ಮಕ್ಕಳ ಮೇಲಿನ ಒಟ್ಟು 148 ಅಪರಾಧಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಅಂದರೆ ಶೇ. 54.72 ರಷ್ಟು ಬೆಂಗಳೂರಿನಲ್ಲೇ ದಾಖಲಾಗಿವೆ. 59 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ, ಅಸಭ್ಯವಾಗಿ ಚಿತ್ರಿಸಿ ಅದನ್ನು ಪ್ರಕಟಿಸುವುದು ಅಥವಾ ಹಂಚಿಕೊಂಡಿರುವುದಕ್ಕೆ ಸಂಬಂಧಿಸಿವೆ. ಆದರೆ, 22 ಪ್ರಕರಣಗಳು ಮಕ್ಕಳ ವಿರುದ್ಧದ ಇತರ ಸೈಬರ್ ಅಪರಾಧಗಳಿಗೆ ಸಂಬಂಧಿಸಿವೆ.

ಸೈಬರ್ ಅಪರಾಧ ಎಸಗಿದಾಗ ಅದು ಜಾಗತಿಕ ನ್ಯಾಯವ್ಯಾಪ್ತಿಯನ್ನು ಹೊಂದಿರಬೇಕು ಎಂದು ಭಾರತದ ಐಟಿ ಕಾಯ್ದೆ ಹೇಳುತ್ತದೆ. ಆದ್ದರಿಂದ, ನಿಮ್ಮ ನಗರ ಅಥವಾ ಇತರೆಡೆ ಇರುವ ಯಾವುದೇ ಸೈಬರ್ ಸೆಲ್/ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ನಿಮಗೆ ಹತ್ತಿರವಿರುವ ಸೈಬರ್ ಸೆಲ್‌ ಅನ್ನು ಸಂಪರ್ಕಿಸುವುದು ಸೂಕ್ತ ಎಂದು ಎನ್‌ಸಿಆರ್‌ಬಿ ಹೇಳಿದೆ.

ಬಾಲ್ಯ ವಿವಾಹ

ಮಹಾಮಾರಿ ಕೋವಿಡ್‌ ವರ್ಷದಲ್ಲಿ ಹೆಲ್ಪ್‌ಲೈನ್‌ಗಳು ಮತ್ತು ಇತರ ಏಜೆನ್ಸಿಗಳಿಗೆ ಹೆಚ್ಚಿನ ಸಂಖ್ಯೆಯ ಬಾಲ್ಯವಿವಾಹ ಏರ್ಪಟ್ಟಿರುವ ವರದಿಯಾಗಿದೆ. ಕರ್ನಾಟಕದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ದಾಖಲಾಗಿರುವ 785 ಪ್ರಕರಣಗಳ ಪೈಕಿ 184 ಕೇಸ್‌ಗಳು ಕರ್ನಾಟಕದಲ್ಲೇ ದಾಖಲಾಗಿವೆ.

ರಾಜ್ಯ ಸರ್ಕಾರ ಎಚ್ಚತ್ತ ನಂತರ ಬಾಲ್ಯವಿವಾಹದ ಅನೇಕ ಪ್ರಕರಣಗಳನ್ನು ತಡೆಯಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ವರದಿಯಲ್ಲಿ ಹೇಳಿದೆ.

2020ರ ಫೆಬ್ರವರಿ - ನವೆಂಬರ್ ನಡುವೆ 2,074 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ - ಅಂಶಗಳು ಹೇಳಿವೆ. ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಹಾಸನ (26), ಮಂಡ್ಯ (25), ಮೈಸೂರು (24) ಹಾಗೂ ಬೆಳಗಾವಿ (19) ಜಿಲ್ಲೆಗಳಲ್ಲಿ ವರದಿಯಾಗಿವೆ.

ಬಳ್ಳಾರಿಯಲ್ಲಿ ಒಟ್ಟು 218 ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದು, ಮೈಸೂರಿನಲ್ಲಿ-177 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 131 ಬಾಲ್ಯವಿವಾಹಗಳನ್ನು ನಿಲ್ಲಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಂದೇ ಒಂದು ಬಾಲ್ಯ ವಿವಾಹದ ಪ್ರಕರಣಗಳು ದಾಖಲಾಗಿಲ್ಲ. ಎನ್‌ಜಿಒಗಳು, ನಾಗರಿಕರು ಹಾಗೂ ಅಧಿಕಾರಿಗಳ ಸಹಾಯದಿಂದ ಬಾಲ್ಯ ವಿವಾಹಗಳನ್ನು ತಡೆಯಲಾಗುತ್ತಿದೆ. ಬಾಲ್ಯ ವಿವಾಹದ ಪ್ರಕರಗಳ ಸಂತ್ರಸ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿದೆ.

ABOUT THE AUTHOR

...view details