ನವದೆಹಲಿ: ಆನ್‌ಲೈನ್ ವಂಚನೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಋತ್ಯ ಜಿಲ್ಲೆಯ ಸೈಬರ್ ಸೆಲ್ ತಂಡವು ಅಪ್ರಾಪ್ತನೊಬ್ಬನನ್ನು ಬಂಧಿಸಿದೆ. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆ ಬಾಲಕನ ಅಸಲಿಯತ್ತು ಬೆಳಕಿಗೆ ಬಂದಿದೆ.
ಇನ್ಸ್ಟಾಗ್ರಾಂನಲ್ಲಿ ಗಾಳ ಹಾಕುತ್ತಿದ್ದ ಬಾಲಕ!
ಬಾಲಕ ಇನ್ಸ್ಟಾಗ್ರಾಂನಲ್ಲಿ ಚೆಂದದ ಹುಡುಗಿಯರ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು ಅಶ್ಲೀಲ ಆ್ಯಪ್ ಮೂಲಕ ಅವರ ಫೋಟೋಗೆ ನಗ್ನವಿರುವ ಫೋಟೋ ಸೇರಿಸಿ ವಿರೂಪಗೊಳಿಸುತ್ತಿದ್ದನು. ಬಳಿಕ ತನ್ನ ಇನ್ಸ್ಟಾಗ್ರಾಂ ಡಿಪಿಗೆ ಹುಡುಗಿ ಫೋಟೋ ಹಾಕಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಪರಿಚಯ ಬೆಳೆದ ಬಳಿಕ ಅಶ್ಲೀಲವಾಗಿ ಕ್ರಿಯೇಟ್ ಮಾಡಿದ ಅವರ ಫೋಟೋಗಳನ್ನು ಕಳುಹಿಸಿ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಿರಿಯ ವಯಸ್ಸಿನ ಹುಡುಗಿರೇ ಇವನ ಟಾರ್ಗೇಟ್!
ಈ ಬಾಲಕ ಕಿರಿಯ ವಯಸ್ಸಿನ ಹುಡುಗಿಯರ ಫೋಟೋ ಕದ್ದು, ಅದಕ್ಕೆ ಅಶ್ಲೀಲ ಫೋಟೋ ಸೇರಿಸಿ ವಿರೂಪಗೊಳಿಸುತ್ತಿದ್ದ. ಬಳಿಕ ಅವರಿಗೆ ಆ ಫೋಟೋ ಕಳುಹಿಸಿ ಬ್ಲಾಕ್ಮೇಲ್ ಮಾಡತ್ತಿದ್ದ. ಈ ಬಾಲಕ ಆ ಹುಡುಗಿಯರಿಗೆ ಬಾತ್ರೂಂಗೆ ತೆರಳಿ ನಗ್ನವಾಗಿರುವ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಹೇಳುತ್ತಿದ್ದ. ಇಲ್ಲವಾದಲ್ಲಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಬೆದರಿದ ಎಷ್ಟೋ ಹುಡುಗಿಯರು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಆತನಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣ ದಾಖಲು...