ನವದೆಹಲಿ:ಬಾಯಿಯಲ್ಲಿ ದಂತ ದ್ರವ್ಯದ ರೂಪದಲ್ಲಿ 951 ಗ್ರಾಂ ಚಿನ್ನ ಸಾಗಿಸುತ್ತಿದ್ದ ಇಬ್ಬರು ಉಜ್ಬೇಕಿ ಪ್ರಜೆಗಳನ್ನು ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ.
ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರ ತಪಾಸಣೆ ವೇಳೆ ಇಬ್ಬರು ಉಜ್ಬೇಕಿ ಪ್ರಜೆಗಳ ಬಾಯಲ್ಲಿ ಚಿನ್ನವಿರುವುದು ಪತ್ತೆಯಾಗಿದೆ.