ಕರ್ನಾಟಕ

karnataka

ETV Bharat / bharat

ಸಿಗರೇಟ್ ನೀಡದ ಕಾರಣಕ್ಕೆ ಪಾನ್​ಶಾಪ್​ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ- ಕಣ್ಣಿನ ದೃಷ್ಟಿ ಕಳೆದುಕೊಂಡ ಮಾಲೀಕ - ಕಣ್ಣಿನ ದೃಷ್ಟಿ ಕಳೆದುಕೊಂಡ ಮಾಲೀಕ

ಗ್ರಾಹಕನಿಂದ ಪಾನ್​ ಶಾಪ್ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ- ಕಣ್ಣಿನ ದೃಷ್ಟಿ ಕಳೆದುಕೊಂಡ ವ್ಯಾಪಾರಿ - ಸಿಗರೇಟ್ ನೀಡದ ಕಾರಣಕ್ಕೆ ಗ್ರಾಹಕನಿಂದ ಮಾಲೀಕನ ಮೇಲೆ ಹಲ್ಲೆ.

Nalanda store owner sustained eye injuries
ಸಿಗರೇಟ್ ನೀಡದ ಕಾರಣಕ್ಕೆ ಪಾನ್​ಶಾಪ್​ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ

By

Published : Feb 1, 2023, 11:30 AM IST

ನಳಂದಾ(ಬಿಹಾರ):ಬಾಕಿ ಉಳಿದ ಹಣ ಪಾವತಿಸುವಂತೆ ತಿಳಿಸಿದ ಕಾರಣಕ್ಕೆ ಪಾನ್​ಶಾಪ್​ ಮಾಲೀಕನ ಮೇಲೆ ಗ್ರಾಹಕ ಹಲ್ಲೆ ಮಾಡಿರುವ ಘಟನೆ ಬಿಹಾರದ ನಳಂದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ನಡೆದಿದೆ. ಗ್ರಾಹಕನೊಬ್ಬ ಅಂಗಡಿಯ ಮಾಲೀಕನ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಅಂಗಡಿಯ ಮಾಲೀಕನ ಕಣ್ಣಿಗೆ ಗಂಭೀರವಾಗಿ ಗಾಯವಾಗಿದ್ದರಿಂದ ರಕ್ತಸ್ರಾವವಾಗಿದೆ, ಪರಿಣಾಮ ದೃಷ್ಟಿ ಕಳೆದುಕೊಂಡಿದ್ದಾನೆ.

ಆರೋಪಿ ಸಿಗರೇಟ್ ಖರೀದಿಸಲು ಅಂಗಡಿಗೆ ಬಂದಿದ್ದ. ಬಾಕಿ ಹಣವನ್ನು ನೀಡುವಂತೆ ಅಂಗಡಿ ಮಾಲೀಕರು ದಾಳಿ ನಡೆಸಿದ ಗ್ರಾಹಕನಿಗೆ ನೆನಪಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಜಗಳ ವಿಕೋಪಕ್ಕೆ ತಿರುಗಿದ್ದು, ಆರೋಪಿ ಅಂಗಡಿಯಲ್ಲಿ ಇಟ್ಟಿದ್ದ ಚಾಕುವಿನಿಂದ ಮಾಲೀಕ ಜಿತೇಂದ್ರ ಕುಮಾರ್​ನ ಕಣ್ಣಿನ ಮೇಲೆ ಹೊಡೆದಿದ್ದಾನೆ.

ತೀವ್ರವಾಗಿ ಗಾಯಗೊಂಡ ಜಿಲ್ಲೆಯ ದೀಪ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಹನೌರ್ ಗ್ರಾಮದ ನಿವಾಸಿ ಜಿತೇಂದ್ರ ಕುಮಾರ್(18) ಅವರನ್ನು ಚಿಕಿತ್ಸೆಗಾಗಿ ಬಿಹಾರ ಶರೀಫ್ ಸದರ್ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ವೈದ್ಯರು ಜಿತೇಂದ್ರ ಕುಮಾರ್‌ಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ, ಅವರನ್ನು ಪಾವಪುರಿಯ ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದರ್ ಆಸ್ಪತ್ರೆಯ ವೈದ್ಯರು ರೋಗಿಯು ತನ್ನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ಚಾಕುವಿನಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ:ಸೋಮವಾರ ತಡರಾತ್ರಿ ಅದೇ ಗ್ರಾಮದ ಮುರಾರಿ ಕುಮಾರ್ ಎಂಬ ಯುವಕ ಅಂಗಡಿಗೆ ಬಂದು ಅಂಗಡಿಯ ಮಾಲೀಕ ಜಿತೇಂದ್ರ ಕುಮಾರ್‌ಗೆ ಸಿಗರೇಟ್ ನೀಡವಂತೆ ಒತ್ತಾಯಿಸಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಾಕಿ ಉಳಿದ ಹಣ ಪಾವತಿಸುವಂತೆ ಜಿತೇಂದ್ರ ಮುರಾರಿಗೆ ತಿಳಿಸಿದರು. ಬಾಕಿ ಹಣ ಮರುಪಾವತಿ ಮಾಡುವವರೆಗೆ ಸಿಗರೇಟ್​ ನೀಡಿವುದಿಲ್ಲ ಎಂದು ಅಂಗಡಿಯ ಮಾಲೀಕ ನಿರಾಕರಿಸಿದನು. ಆರೋಪಿ ಸಿಟ್ಟಿಗೆದ್ದು ಅಂಗಡಿಯ ಕೌಂಟರ್ ಮೇಲೆ ಬಿದ್ದಿದ್ದ ಚಾಕು ತೆಗೆದುಕೊಂಡು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾನೆ.

ತನಿಖೆಗೆ ಪೊಲೀಸ್ ತಂಡ ರಚನೆ:ತೀವ್ರವಾಗಿ ಗಾಯಗೊಂಡ ಜಿತೇಂದ್ರನನ್ನು ಗ್ರಾಮಸ್ಥರ ಸಹಾಯದಿಂದ ಬಿಹಾರ ಶರೀಫ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರೋಗಿ ತಪಾಸಣೆ ನಡೆಸಿದ ವೈದ್ಯ ಡಾ.ರಾಜೀವ್ ರಂಜನ್ ಅವರು, ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಬಳಿಕ ಗಾಯಾಳು ಜಿತೇಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾವಪುರಿಯಲ್ಲಿರುವ ವರ್ಧಮಾನ್ ಮಹಾವೀರ್ ಆಸ್ಪತ್ರೆಯ ನೇತ್ರ ವಿಭಾಗಕ್ಕೆ ಶಿಫ್ಟ್ ಮಾಡಲಾಯಿತು. ಈ ಸಂಬಂಧ ಲಿಖಿತ ದೂರು ಬಂದಿದ್ದು, ತನಿಖೆಗೆ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಠಾಣಾಧಿಕಾರಿ ಎಸ್.ಕೆ.ಜೈಸ್ವಾಲ್ ತಿಳಿಸಿದರು.

ಇದನ್ನೂ ಓದಿ:ಅಪಾರ್ಟ್‌ಮೆಂಟ್​ನಲ್ಲಿ ಅಗ್ನಿ ದುರಂತ: ನಾಲ್ವರು ಮಕ್ಕಳು ಸೇರಿ 14 ಜನರ ಸಜೀವ ದಹನ

For All Latest Updates

ABOUT THE AUTHOR

...view details