ಕರ್ನಾಟಕ

karnataka

ಸಿರಿಧಾನ್ಯಗಳ ಬದಲು ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜದ ಕೃಷಿಗೆ ಹೆಚ್ಚು ಒತ್ತು ನೀಡಿ : ಕೃಷಿ ಅರ್ಥಶಾಸ್ತ್ರಜ್ಞ

By

Published : Sep 11, 2021, 6:53 PM IST

ಏಕೆ ಎಂಎಸ್‌ಪಿ ಹೆಚ್ಚಿಸಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ದೇಶದಲ್ಲಿ ಕೆಲವು ಬೆಳೆಗಳ ಕೊರತೆಯಿದ್ದಾಗ, ಸರ್ಕಾರವು ನಿರ್ದಿಷ್ಟ ಬೆಳೆಯ ಉತ್ಪಾದನೆಗೆ ರೈತರನ್ನು ಪ್ರೋತ್ಸಾಹಿಸುತ್ತದೆ. ಇದು ದೇಶದ ಆಹಾರ ಭದ್ರತೆಯನ್ನೂ ಹೆಚ್ಚಿಸುತ್ತದೆ..

ವಿಜಯ್ ಸರ್ದಾನ
ವಿಜಯ್ ಸರ್ದಾನ

ನವದೆಹಲಿ :ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಸಿರಿಧಾನ್ಯಗಳ ಬದಲು ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜದ ಕೃಷಿಗೆ ಹೆಚ್ಚು ಒತ್ತು ನೀಡುವಂತೆ ಕೃಷಿ ಅರ್ಥಶಾಸ್ತ್ರಜ್ಞ ವಿಜಯ್ ಸರ್ದಾನ್ ಹೇಳುತ್ತಾರೆ.

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಪ್ರತಿ ಕ್ವಿಂಟಾಲ್‌ ಗೋಧಿಗೆ 1,975 ರೂ. ರಿಂದ 2,015ರೂ. ಹಾಗೂ 4,650 ರೂ. ಇದ್ದ ಪ್ರತಿ ಕ್ವಿಂಟಾಲ್‌ ಸಾಸಿವೆಗೆ 5,050ರೂ. ಸೇರಿದಂತೆ ಹಿಂಗಾರು ಬೆಳೆಗಳಿ ಎಂಎಸ್‌ಪಿ ನಿಗದಿ ಮಾಡಲಾಗಿದೆ.

ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ವಿಜಯ್ ಸರ್ದಾನ್

ಈ ಬಗ್ಗೆ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಜಯ್ ಸರ್ದಾನ್, ಹೊಸ ಎಂಎಸ್‌ಪಿ ದರಗಳೊಂದಿಗೆ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ, ಎಣ್ಣೆಬೀಜಗಳ ಎಂಎಸ್‌ಪಿ ಪ್ರತಿ ಕ್ವಿಂಟಾಲ್‌ಗೆ 4500-5000 ರೂಪಾಯಿಯಿದೆ.

ಆದರೆ, ಮಾರುಕಟ್ಟೆಯಲ್ಲಿ 8000-9000 ರೂ.ಗೆ ಏರಿಕೆಯಾಗಿದೆ. ಹೀಗಾಗಿ, ರೈತರು ಸಿರಿಧಾನ್ಯಗಳ ಬದಲು ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜದ ಕೃಷಿಗೆ ಹೆಚ್ಚು ಒತ್ತು ನೀಡಿದರೆ ಲಾಭವನ್ನು ದ್ವಿಗುಣಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ದೊಡ್ಡ ಬಳ್ಳಾಪುರದಲ್ಲಿ ತೆಂಗಿನ ಗರಿ ಗ್ಯಾಂಗ್ ಬಂಧನ: ನಿಟ್ಟುಸಿರು ಬಿಟ್ಟ ರೈತರು

ಏಕೆ ಎಂಎಸ್‌ಪಿ ಹೆಚ್ಚಿಸಲಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ದೇಶದಲ್ಲಿ ಕೆಲವು ಬೆಳೆಗಳ ಕೊರತೆಯಿದ್ದಾಗ, ಸರ್ಕಾರವು ನಿರ್ದಿಷ್ಟ ಬೆಳೆಯ ಉತ್ಪಾದನೆಗೆ ರೈತರನ್ನು ಪ್ರೋತ್ಸಾಹಿಸುತ್ತದೆ. ಇದು ದೇಶದ ಆಹಾರ ಭದ್ರತೆಯನ್ನೂ ಹೆಚ್ಚಿಸುತ್ತದೆ ಅಂತಾರೆ ವಿಜಯ್ ಸರ್ದಾನ್.

ABOUT THE AUTHOR

...view details