ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)ಯನ್ನು ಮುಂದೂಡಲಾಗಿದೆ. ಈ ಸಂಬಂಧ ಸಿಬಿಎಸ್‌ಇ ಸುತ್ತೋಲೆ ಹೊರಡಿಸಿದೆ. ನಿನ್ನೆ ಮತ್ತು ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ತಾಂತ್ರಿಕ ದೋಷಗಳಿಂದಾಗಿ ತಡೆಹಿಡಿಯಲಾಗಿತ್ತು.
ನಿನ್ನೆಯ ಪೇಪರ್ 2 ಎಕ್ಸಾಂ ನಡೆದಿರಲಿಲ್ಲ ಮತ್ತು ಇಂದು ನಡೆಯಬೇಕಿದ್ದ ಎರಡೂ ಪೇಪರ್ನ ಪರೀಕ್ಷೆ ನಡೆದಿಲ್ಲ. ಎರಡೂ ಪರೀಕ್ಷೆಗಳ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ.