ಗುವಾಹಟಿ, ಅಸ್ಸೋಂ :ಭಾರತದ ಈಶಾನ್ಯ ರಾಜ್ಯಗಳಲ್ಲಿ ಗುವಾಹಟಿ ಅತ್ಯಂತ ಕಲುಷಿತ ನಗರವಾಗಿದೆ. ತ್ರಿಪುರಾ ನಂತರದ ಸ್ಥಾನದಲ್ಲಿದೆ ಎಂದು ನವದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ವರದಿಯಲ್ಲಿ ಉಲ್ಲೇಖಿಸಿದೆ.
ಭಾರತದ ಈಶಾನ್ಯ ರಾಜ್ಯಗಳಲ್ಲಿ ವಾಯು ಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಗಂಗಾನದಿ ಬಯಲು ಪ್ರದೇಶದಲ್ಲಿ ಮತ್ತು ಉತ್ತರ ಭಾರತದ ಈಗಿನ ಸ್ಥಿತಿ ಮಾಲಿನ್ಯ ಪ್ರಮಾಣ ದೇಶದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸುವ ಮಟ್ಟದಲ್ಲಿವೆ ಎಂದು ಸಿಎಸ್‌ಇ ಕಾರ್ಯನಿರ್ವಾಹಕಿಯಾದ ಅನುಮಿತಾ ರಾಯ್ ಚೌಧರಿ ಹೇಳಿದ್ದಾರೆ.