ನವದೆಹಲಿ :ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಮಸೂದೆಯನ್ನು ಸಚಿವ ಸಂಪುಟ ಅನುಮೋದಿಸಿದ ತಕ್ಷಣ ಅಧಿವೇಶನದಲ್ಲಿ ಸರ್ಕಾರ ಮಂಡಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ ಭಾಗವಾಗಿ ರಾಜ್ಯಸಭೆಯಲ್ಲಿನ ಕೋಲಾಹಲದ ನಡುವೆಯೂ ಮಾತನಾಡಿದ ವಿತ್ತ ಸಚಿವರು, ಕ್ರಿಪ್ಟೋಕರೆನ್ಸಿಯ ವ್ಯಾಪ್ತಿ ಅಪಾಯಕಾರಿ. ಇದು ಸಂಪೂರ್ಣ ನಿಯಂತ್ರಣ ಚೌಕಟ್ಟನ್ನು ಹೊಂದಿಲ್ಲ ಎಂದು ಪ್ರಶ್ನೋತ್ತರ ವೇಳೆಯಲ್ಲಿ ವಿವರಿಸಿದರು.
ದಾರಿ ತಪ್ಪಿಸುವಂತಹ ಜಾಹೀರಾತುಗಳನ್ನು ನಿಷೇಧಿಸಲಾಗುತ್ತಿದೆಯೇ ಎಂದು ಬಿಹಾರದ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿ, ಕಳೆದ ಬಾರಿಯೂ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆಯನ್ನು ಪ್ರಮುಖ ಅಂಶಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಅದು ಸದನಕ್ಕೆ ಬಂದಿಲ್ಲ ಎಂದು ಹೇಳಿದರು.