ಕರ್ನಾಟಕ

karnataka

ETV Bharat / bharat

ಕ್ರೂಸರ್​​​-ಟ್ರಕ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಮಂದಿ ದುರ್ಮರಣ, ಹಲವರು ಗಂಭೀರ - ಲಾತೂರ್​ನಲ್ಲಿ ಭೀಕರ ಅಪಘಾತ

ಲಾತೂರ್​ ಬಳಿ ನಡೆದಿರುವ ಭೀಕರ ರಸ್ತೆ ಅಪಘಾತವೊಂದರಲ್ಲಿ ಏಳು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Truck Cruiser Accident
Truck Cruiser Accident

By

Published : Apr 23, 2022, 3:32 PM IST

Updated : Apr 23, 2022, 10:54 PM IST

ಲಾತೂರ್​​(ಮಹಾರಾಷ್ಟ್ರ):ಲಾತೂರ್​​ನಿಂದ ಅಂಬಾಜೋಗೈ ಕಡೆಗೆ ತೆರಳುತ್ತಿದ್ದ ಕ್ರೂಸರ್​​ವೊಂದು ಟ್ರಕ್​ಗೆ ಡಿಕ್ಕಿ ಹೊಡೆದಿದ್ದು 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಅನೇಕರ ಮೃತದೇಹಗಳು ಛಿದ್ರವಾಗಿವೆ.

ಅಪಘಾತದಿಂದಾಗಿ ಕೆಲಹೊತ್ತು ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಘಟನಾ ಸ್ಥಳದಲ್ಲಿ ಜಮಾಯಿಸಿದ ಜನರು ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದುರಂತದಲ್ಲಿ ಕೆಲ ಮಹಿಳೆಯರು ಹಾಗೂ ಮಕ್ಕಳು ಅಸುನೀಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:100 ರೂಪಾಯಿ ಕೊಡಲು ನಿರಾಕರಿಸಿದ್ದಕ್ಕೆ ತಾಯಿಯನ್ನೇ ಕೊಲೆಗೈದ ಮಗ

ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇಂದು ಬೆಳಗ್ಗೆ 10 ಗಂಟೆ ವೇಳೆ ಈ ಅಪಘಾತ ಸಂಭವಿಸಿದೆ. ಸಂಬಂಧಿಕರ ಕಾರ್ಯಕ್ರಮಕ್ಕಾಗಿ ಕ್ರೂಸರ್​​ನಲ್ಲಿ ತೆರಳುತ್ತಿದ್ದಾಗ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಿರ್ಮಲಾ ಸೋಮವಂಶಿ (38), ಸ್ವಾತಿ ಬೋಡ್ಕೆ (35), ಶಕುಂತಲಾ ಸೋಮವಂಶಿ (38), ಸೋಜರಬಾಯಿ ಕದಂ (37), ಚಿತ್ರಾ ಶಿಂಧೆ (35), ಡ್ರೈವರ್​ ಖಂಡು ರೋಹಿಲೆ (35) ಸಾವನ್ನಪ್ಪಿದ್ದಾರೆ. ರಾಜಮತಿ (50), ಸೋನಾಲಿ (25), ರಂಜನಾ ಮಾನೆ (35), ಪರಿಮಳಾ (70), ದತ್ತಾತ್ರಯ ಪವಾರ್ (40), ಶಿವಾಜಿ ಪವಾರ್ (45), ಯಶ್ ಬೋಡ್ಕೆ (9), ಶ್ರುತಿಕಾ ಪವಾರ್ (6), ಗುಲಾಬ್ರಾವ್ (50) ಮತ್ತು ಕಮಲ್ ಜಾಧವ್ (30) ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಅಪಘಾತದ ಬಗ್ಗೆ ತಿಳಿಯುತ್ತಿದ್ದಂತೆ ಸಚಿವ ಧನಂಜಯ್ ಮುಂಡೆ ಅವರ ಆಪ್ತ ಸಹಾಯಕರಾದ ಖಂಡು ಗೋರ್​ ಸೇರಿದಂತೆ ಅನೇಕರು ಆಸ್ಪತ್ರೆಗೆ ದಾವಿಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಕಿರಿದಾದ ರಸ್ತೆ ಅಪಘಾತ ಸಂಭವಿಸಲು ಕಾರಣವಾಗಿದೆ ಎಂದು ಹೇಳಲಾಗ್ತಿದ್ದು, ಈ ಹಿಂದೆ ಕೂಡ ಅನೇಕ ಅವಘಡಗಳು ಇಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

Last Updated : Apr 23, 2022, 10:54 PM IST

ABOUT THE AUTHOR

...view details