ಕರ್ನಾಟಕ

karnataka

ETV Bharat / bharat

ಡ್ರಗ್ಸ್​ ಪಾರ್ಟಿ ಪ್ರಕರಣ.. ಶಾರುಖ್​ ಪುತ್ರ ಸೇರಿ ಇತರೆ ಆರೋಪಿಗಳು ಅ. 7ರ ವರೆಗೆ ಎನ್​ಸಿಬಿ ಕಸ್ಟ್​ಡಿಗೆ - Esplanade Court

ಬಾಲಿವುಡ್​ ಕಿಂಗ್​ಖಾನ್​ ಶಾರುಖ್​ ಪುತ್ರ ಆರ್ಯನ್​ ಸೇರಿದಂತೆ ಇತರೆ ಆರೋಪಿಗಳಿಗೆ Esplanade Court ಅಕ್ಟೋಬರ್​ 7ರವರೆಗೆ ಎನ್​ಸಿಬಿಗೆ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

Aryan Khan
ಶಾರುಖ್​ ಪುತ್ರ ಆರ್ಯನ್

By

Published : Oct 4, 2021, 6:03 PM IST

Updated : Oct 4, 2021, 6:12 PM IST

ಮುಂಬೈ:ಕ್ರೂಸ್​ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಆಯೋಜನೆ ಆರೋಪ ಹಿನ್ನೆಲೆ ಎನ್​ಸಿಬಿ ಕೈಗೆ ಸಿಕ್ಕಿಬಿದ್ದಿರುವ ಬಾಲಿವುಡ್​ ಕಿಂಗ್​ಖಾನ್​ ಶಾರುಖ್​ ಪುತ್ರ ಆರ್ಯನ್​ ಸೇರಿದಂತೆ ಇತರೆ ಆರೋಪಿಗಳಿಗೆ Esplanade Court ಅಕ್ಟೋಬರ್​ 7ರವರೆಗೆ ಎನ್​ಸಿಬಿಗೆ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಬಾಲಿವುಡ್​ ನಟ ಶಾರುಖ್​​ ಖಾನ್​ ಪುತ್ರ ಆರ್ಯನ್​ ಖಾನ್, ಆರ್ಬಾಜ್​ ಸೇಠ್​ ಮರ್ಚಂಟ್​ ಮತ್ತು ಮುನ್​ಮುನ್​ ಧಮೇಚಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಈ ಆದೇಶ ಹೊರಡಿಸಿದೆ. ಎನ್​ಸಿಬಿ ಪರ ಎಎಸ್​ಜಿ ಅನಿಲ್​ ಮತ್ತು ಆರ್ಯನ್​ ಪರ ವಕೀಲ ಸತೀಶ್​ ಮಾನಶಿಂಧೆ ವಾದ ಮಂಡಿಸಿದರು.

ಅಕ್ಟೋಬರ್​ 11ರವರೆಗೆ ಕಸ್ಟಡಿಗೆ ಕೇಳಿದ ಎನ್​ಸಿಬಿ:

ಸಾಮಾಜದಲ್ಲಿ ಮಾದಕ ವಸ್ತು ಸೇವನೆ ಎಂಬುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ವಿವಿಐಪಿಗಳ ಮಕ್ಕಳು ರೋಲ್​ ಮಾಡೆಲ್​ಗಳಾಗುತ್ತಿದ್ದಾರೆ. ಮೊದಲು ನಮ್ಮ ಕಾರ್ಯಾಚರಣೆ ಕುರಿತು ಇವರುಗಳು ಅರ್ಥಮಾಡಿಕೊಳ್ಳಬೇಕು. ಮಾದಕ ವಸ್ತು ಸೇವನೆ ತಡೆಯುವುದು ನಮ್ಮ ಗುರಿ, ಹಾಗೂ ಡ್ರಗ್ಸ್​ ಪೆಡ್ಲರ್​ಗಳ ಬಂಧನ ನಮ್ಮ ಉದ್ದೇಶ. ಅದಕ್ಕಾಗಿ ಅಕ್ಟೋಬರ್​ 11ರವರೆಗೆ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ಎನ್​ಸಿಬಿ ಪರ ವಕೀಲರು ವಾದ ಮಂಡಿಸಿದರು.

ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ: ವಕೀಲರ ವಾದ

ಎನ್​​ಸಿಬಿ ವಕೀಲರ ವಾದವನ್ನು ಅಲ್ಲಗಳೆದಿರುವ ಆರ್ಯನ್​ ಪರ ವಕೀಲರು, ಶಾರುಖ್​ ಪುತ್ರ ಯಾವುದೇ ಡ್ರಗ್ಸ್​ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. ಅವರ ಸ್ನೇಹಿತನಿಂದ 6ಗ್ರಾಂ ಚರಸ್​ ವಶಕ್ಕೆ ಪಡೆಯಲಾಗಿದೆ. ಶಿಪ್​ನಲ್ಲಿ ಹೋಗಲು ಆರ್ಯನ್ ​ಒಂದು ಪೈಸೆ ಹಣವನ್ನೂ ನೀಡಿಲ್ಲ. ಬೇಕಿದ್ದರೆ ಆರ್ಯನ್​ ವಾಟ್ಸ್​ಆ್ಯಪ್​​ ಚಾಟ್​ ಪರಿಶೀಲಿಸಬಹುದು ಎಂದು ವಕೀಲ ಸತೀಶ್​ ಮಾನಶಿಂಧೆ ವಾದ ಮಂಡಿಸಿದರು.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ - 1985ರ (ಎನ್‌ಡಿಪಿಎಸ್‌ ಕಾಯ್ದೆ) ವಿವಿಧ ಸೆಕ್ಷನ್‌ಗಳ ಅಡಿ ನಿನ್ನೆ ಬಂಧಿಸಲಾಗಿತ್ತು. ಖಾನ್ ಮತ್ತು ಇತರ 7 ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ವಶಕ್ಕೆ ಪಡೆದು ಇಂದು ಕೋರ್ಟ್​ ಮುಂದೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಎನ್​​​ಸಿಬಿ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಿತ್ತು.

ಈ ಬಗ್ಗೆ ನಿನ್ನೆ, ಮುಂಬೈ ನ್ಯಾಯಾಲಯ ಅಕ್ಟೋಬರ್ 4ರವರೆಗೆ (ಸೋಮವಾರ) ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ನೀಡಿತ್ತು. ಕೋರ್ಟ್​​ನ ಆದೇಶದಂತೆ ಇವತ್ತು ಮತ್ತೆ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಶನಿವಾರ ರಾತ್ರಿ ಮುಂಬೈನಿಂದ ಗೋವಾದತ್ತ ತೆರಳುತ್ತಿದ್ದ ಕ್ರೂಸ್​ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಆಯೋಜಿಸಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ಓದಿ:ಡ್ರಗ್ಸ್​ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗನ ಹೆಸರು : ಆ ಮಗುವಿಗೆ ಉಸಿರಾಡಲು ಬಿಡಿ ಎಂದ ಸುನೀಲ್ ಶೆಟ್ಟಿ

Last Updated : Oct 4, 2021, 6:12 PM IST

ABOUT THE AUTHOR

...view details