ಮುಂಬೈ :ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ 4,500 ರೂ. ಮನಿ ಆರ್ಡರ್ ಮಾಡಲಾಗಿದೆ. ಪೋಷಕರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಲು ಅವಕಾಶ ನೀಡಲಾಗಿದೆ.
ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿ ಆದೇಶ ತೀರ್ಪು ಅಕ್ಟೋಬರ್ 20ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ, ಮತ್ತೊಂದು ವಾರ ಜೈಲಿನಲ್ಲಿ ಕಳೆಯಬೇಕಾಗಿರುವುದರಿಂದ ಆತನಿಗೆ ಜೈಲಿನಲ್ಲಿ ತನ್ನಿಷ್ಟದ ಆಹಾರ ಹಾಗೂ ಇತರೆ ವಸ್ತು ಖರೀದಿ ಮಾಡಲು 4,500 ರೂ. ಮನಿ ಆರ್ಡರ್ ಮಾಡಲಾಗಿದೆ. ಜೈಲಿನಲ್ಲಿರುವ ವ್ಯಕ್ತಿಗೆ ಗರಿಷ್ಠ ಇಷ್ಟು ಹಣ ಮನಿ ಆರ್ಡರ್ ಮಾಡಬಹುದಾಗಿದೆ.
ಇದರ ಜೊತೆಗೆ ವಾರದಲ್ಲಿ 2 ಸಲ ಪೋಷಕರೊಂದಿಗೆ ವಿಡಿಯೋ ಕಾಲ್ ಮೂಲಕ 10 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ. ಹೀಗಾಗಿ, ಪೋಷಕರಾದ ಶಾರುಖ್ ಖಾನ್ ಹಾಗೂ ಗೌರಿ ಅವರ ಜೊತೆ ಮಾತನಾಡಿದ್ದಾಗಿ ತಿಳಿದು ಬಂದಿದೆ. ಜಾಮೀನು ಅರ್ಜಿ ಮೇಲಿಂದ ಮೇಲೆ ಮುಂದೂಡಿಕೆಯಾಗುತ್ತಿರುವ ಕಾರಣ ಈಗಾಗಲೇ ಆರ್ಯನ್ ಖಾನ್ 12 ದಿನ ಜೈಲಿನಲ್ಲಿ ಕಳೆದಿದ್ದಾರೆ.