ಅನಂತಪುರ (ಆಂಧ್ರಪ್ರದೇಶ) : ಭೂ ವಿವಾದಕ್ಕೆ ಶುರುವಾದ ಜಗಳ ಅವಳಿ ಕೊಲೆಗಳಲ್ಲಿ ಅಂತ್ಯವಾಗಿದೆ. ಜಿಲ್ಲೆಯ ಯಲ್ಲಾನೂರು ಮಂಡಲದ ಆರವೇಡು ಗ್ರಾಮದಲ್ಲಿ ಸಹೋದರರಾದ ನಾರಾಯಣಪ್ಪ ಮತ್ತು ರಾಜಗೋಪಾಲ್ ಅವರನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ.
ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ನಾರಾಯಣಪ್ಪ ಉಳುಮೆ ಮಾಡುತ್ತಿದ್ದ. ಆ ಜಮೀನಲ್ಲಿ ನಾಲ್ಕು ತಿಂಗಳ ಹಿಂದೆ ಅದೇ ಊರಿನ ನಾಗೇಶ್ ಬೋರ್ವೆಲ್ ಕೊರೆಸಿದ ಎನ್ನಲಾಗ್ತಿದೆ. ಇದರಿಂದಾಗಿ ನಾರಾಯಣಪ್ಪ ಮತ್ತು ನಾಗೇಶ್ ಕುಟುಂಬಗಳ ಮಧ್ಯೆ ವೈಷಮ್ಯ ಉಂಟಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ನಿನ್ನೆ ರಾತ್ರಿ ಬೈಕ್ನಲ್ಲಿ ಮನೆಗೆ ಬರುತ್ತಿದ್ದಾಗ ವಿರೋಧಿ ಬಣ ಸಹೋದರರಿಬ್ಬರನ್ನು ಹತ್ಯೆಗೈಯ್ದಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಶಾಸಕ ಪೆಡ್ಡಿರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.