ಕರ್ನಾಟಕ

karnataka

ETV Bharat / bharat

ನಕ್ಸಲರಿಂದ ಕೋಬ್ರಾ ಕಮಾಂಡೋ ಅಪಹರಣ: ಹುಡುಕಾಟ ಚುರುಕುಗೊಳಿಸಿದ ಭದ್ರತಾ ಪಡೆ - ಕೋಬ್ರಾ ಕಮಾಂಡೋ

ಶನಿವಾರ - ಭಾನುವಾರ ಛತ್ತೀಸ್‌ಗಢದಲ್ಲಿ ನಡೆದ ಭೀಕರ ಎನ್​ಕೌಂಟರ್​ ವೇಳೆ ಸುಮಾರು 400 ಮಂದಿ ನಕ್ಸಲರು ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದಿದ್ದರು. ಈ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 31 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಇವರಲ್ಲಿ 16 ಮಂದಿ ಸಿಆರ್‌ಪಿಎಫ್ ಯೋಧರಾಗಿದ್ದರು.

crpf-jawan-held-hostage-by-naxals-confirm-forces
ನಕ್ಸಲರಿಂದ ಕೋಬ್ರಾ ಕಮಾಂಡೋ ಅಪಹರಣ:

By

Published : Apr 5, 2021, 6:47 PM IST

ನವದೆಹಲಿ:ಛತ್ತೀಸ್​ಗಢದಲ್ಲಿ ನಡೆದ ನಕ್ಸಲರು ಹಾಗೂ ಭದ್ರತಾ ಪಡೆ ನಡುವಿನ ಎನ್​ಕೌಂಟರ್​ನಲ್ಲಿ ಓರ್ವ ಕೋಬ್ರಾ ಕಮಾಂಡೋನನ್ನು ನಕ್ಸಲರು ಅಪಹರಿಸಿದ್ದಾರೆ ಎಂದು ವರದಿಯಾಗಿತ್ತು. ನಕ್ಸಲರು ಬಿಜಾಪುರಮೂಲದ ಪತ್ರಕರ್ತರೊಬ್ಬರಿಗೆ ಕರೆ ಮಾಡಿ ಕಮಾಂಡೋವನ್ನು ಅಪರಿಸಿರುವುದಾಗಿ ಹೇಳಿದ್ದರು.

210ನೇ ಬೆಟಾಲಿಯನ್​​ನ ಕೋಬ್ರಾ ಕಮಾಂಡರ್ ಅವರನ್ನು ಪತ್ತೆ ಮಾಡಲು ಇದಿಗ ಎಲ್ಲಾ ಕಾರ್ಯ ನಡೆಯುತ್ತಿದೆ. ಆದರೆ ನಕ್ಸಲರು ಅವರನ್ನು ಅಪಹರಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ನಮ್ಮಬಳಿ ಪ್ರಬಲ ಪುರಾವೆಯಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.

ಅಪಹರಣವಾದ ಕಮಾಂಡೋ ಪತ್ನಿ

ಭಾನುವಾರ ನಕ್ಸಲ್ ವಿರುದ್ಧದ ಕಾರ್ಯಾಚರಣೆಗಾಗಿ ಕಮಾಂಡೋ ಮಿನ್ಹಾಸ್​ ತಂಡದ ಜೊತೆ ಹೊರಬಂದಿದ್ದ. ಆದರೆ ಕಾರ್ಯಾಚರಣೆ ವೇಳೆ 22 ಮಂದಿ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾದರೆ, 31 ಮಂದಿ ಗಾಯಗೊಂಡಿದ್ದರು. ಈ ನಡುವೆ ಜಮ್ಮುವಿನಲ್ಲಿರುವ ವಿನ್ಹಾಸ್ ನಿವಾಸಕ್ಕೆ ಭದ್ರತಾ ಅಧಿಕಾರಿ ಭೇಟಿ ನೀಡಿದ್ದು, ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ:'U' ಆಕಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದಿದ್ದ 400 ನಕ್ಸಲರು!

ABOUT THE AUTHOR

...view details