ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ತನಿಖಾ ಸಂಸ್ಥೆಯ ಹೆಚ್ಚುವರಿ ಉಸ್ತುವಾರಿ ಪಡೆದ ಸಿಆರ್‌ಪಿಎಫ್ ಡಿಜಿ ಕುಲದೀಪ್ ಸಿಂಗ್ - ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲದೀಪ್ ಸಿಂಗ್

ಸಿಂಗ್ ಅವರಿಗಿಂತ ಎರಡು ವರ್ಷ ಹಿರಿಯರಾಗಿರುವ 1984ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವೈ.ಸಿ. ಮೋದಿ ಅವರು ಮೇ 31ರಂದು ನಿವೃತ್ತರಾಗಲಿದ್ದಾರೆ..

CRPF DG Kuldiep Singh gets additional charge of National Investigation Agency
CRPF DG Kuldiep Singh gets additional charge of National Investigation Agency

By

Published : May 29, 2021, 4:32 PM IST

Updated : May 29, 2021, 4:40 PM IST

ನವದೆಹಲಿ:ಭಯೋತ್ಪಾದನಾ ವಿರೋಧಿ ಏಜೆನ್ಸಿಯ ಡಿಜಿ ಈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿರುವ ಕಾರಣ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮುಖ್ಯಸ್ಥರಾಗಿ ಹೆಚ್ಚುವರಿ ಉಸ್ತುವಾರಿ ನೀಡಲಾಗಿದೆ.

ಈ ವರ್ಷದ ಮಾರ್ಚ್ 16ರಿಂದ ಸಿಆರ್‌ಪಿಎಫ್ ಮಹಾನಿರ್ದೇಶಕ ಹುದ್ದೆಯನ್ನು ನಿರ್ವಹಿಸುತ್ತಿರುವ 1986ರ ಬ್ಯಾಚ್‌ನ ಪಶ್ಚಿಮ ಬಂಗಾಳದ ಕೇಡರ್ ಅಧಿಕಾರಿ ಕುಲದೀಪ್ ಸಿಂಗ್‌ಗೆ ಗೃಹ ಸಚಿವಾಲಯ ಹೆಚ್ಚುವರಿ ಜವಾಬ್ದಾರಿ ವಹಿಸಿದೆ.

ಸಿಂಗ್ ಅವರಿಗಿಂತ ಎರಡು ವರ್ಷ ಹಿರಿಯರಾಗಿರುವ 1984ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವೈ.ಸಿ. ಮೋದಿ ಅವರು ಮೇ 31ರಂದು ನಿವೃತ್ತರಾಗಲಿದ್ದಾರೆ.

Last Updated : May 29, 2021, 4:40 PM IST

ABOUT THE AUTHOR

...view details