ನವದೆಹಲಿ: ಕಾಶ್ಮೀರದಲ್ಲಿ ಮುಂದಿನ ದಿನಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ಎದುರಿಸಿಲು ಹಾಗೂ ಭದ್ರತಾ ಪಡೆಗಳಿಗೆ ಸಹಾಯ ಒದಗಿಸುವ ದೃಷ್ಟಿಯಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯೂ (ಸಿಆರ್‌ಪಿಎಫ್) ವಿಶೇಷ ತರಬೇತಿ ಪಡೆದ 100 ಕೋಬ್ರಾ ಕಮಾಂಡೋಗಳನ್ನು ನಿಯೋಜಿಸಿದೆ.
ವಿಶೇಷವಾಗಿ ಕಣಿವೆಯ ಪರ್ವತ ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ನಡೆಯಲಿರುವ ಭಯೋತ್ಪಾದಕ ದಾಳಿಗಳನ್ನು ಎದುರಿಸುವ ಜೊತೆಗೆ ಕೋಬ್ರಾ ಕಮಾಂಡೋಗಳು ದೇಶದ ಇತರ ಭದ್ರತಾ ಪಡೆಗಳಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯ ಮಾಡಲಿದ್ದಾರೆ ಎಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
CRPF ನ ಕೋಬ್ರಾ ಕಮಾಂಡೋಗಳು ಬೆಟಾಲಿಯನ್ ಜಂಗಲ್ ಮತ್ತು ಗೆರಿಲ್ಲಾ ಯುದ್ಧದಲ್ಲಿ ವಿಶೇಷವಾಗಿ ತರಬೇತಿ ಪಡೆದಿದ್ದು, ನಕ್ಸಲರನ್ನು ಎದುರಿಸಲು ಅವರನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅರಣ್ಯದಿಂದ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನ ಮೂಲದ ಭಯೋತ್ಪಾದಕರ ತಂತ್ರಗಳನ್ನು ಬದಲಾಯಿಸಿದ ನಂತರ ಕೇಂದ್ರ ಸರ್ಕಾರವು ಕೋಬ್ರಾ ಕಮಾಂಡೋಗಳನ್ನು ನಿಯೋಜಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ಕೋಕೆರ್‌ನಾಗ್‌ದಂತ ದಾಳಿ ಎದುರಿಸಲು 100 ಕೋಬ್ರಾ ಕಮಾಂಡೋ:ಈ ತಿಂಗಳ ಆರಂಭದಲ್ಲಿ ಅನಂತ್‌ನಾಗ್ ಜಿಲ್ಲೆಯ ಕೋಕೆರ್‌ನಾಗ್‌ನ ದಟ್ಟ ಅರಣ್ಯದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ ದಾಳಿಯ ಕೃತ್ಯದಲ್ಲಿ ಕರ್ನಲ್ ಮತ್ತು ಸೇನೆಯ ಮೇಜರ್, ಮತ್ತು ಜಮ್ಮು ಕಾಶ್ಮೀರದ ಡಿಎಸ್‌ಪಿ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾದರು.