ಕರ್ನಾಟಕ

karnataka

ETV Bharat / bharat

ರೆಡ್​ಲೈಟ್ ಏರಿಯಾದಲ್ಲಿ 144 ಸೆಕ್ಷನ್ ತೆರವು.. ಐದು ವೇಶ್ಯಾಗೃಹಗಳಿಗೆ ಬೀಗ - ರೆಡ್​ಲೈಟ್ ಏರಿಯಾದಲ್ಲಿ 144 ಸೆಕ್ಷನ್ ತೆರವು

ನಾಗ್ಪುರದಲ್ಲಿ ಶಾಲೆ, ಧಾರ್ಮಿಕ ಕೇಂದ್ರಗಳಿಗೆ ಹತ್ತಿರವಾಗಿದ್ದ ಐದು ವೇಶ್ಯಾಗೃಹಗಳನ್ನು ಮುಚ್ಚಿಸಲು ಪೊಲೀಸ್​ ಇಲಾಖೆ ಮುಂದಾಗಿದೆ.

ಐದು ವೇಶ್ಯಾಗೃಹಗಳಿಗೆ ಬೀಗ
ಐದು ವೇಶ್ಯಾಗೃಹಗಳಿಗೆ ಬೀಗ

By

Published : Sep 4, 2021, 7:37 AM IST

ನಾಗ್ಪುರ(ಮಹಾರಾಷ್ಟ್ರ): ಶಾಲೆಗಳು, ಧಾರ್ಮಿಕ ಸ್ಥಳಗಳ 200 ಮೀಟರ್​​ ವ್ಯಾಪ್ತಿಯೊಳಗೆ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಆದರೆ, ಜಿಲ್ಲೆಯ ಗಂಗಾ-ಜಮುನಾ ಪ್ರದೇಶದಲ್ಲಿ ಶಾಲೆ, ದೇವಸ್ಥಾನಗಳಿಗೆ ಹತ್ತಿರವಾಗಿ ವೇಶ್ಯಾಗೃಹಗಳಿದ್ದರಿಂದ ಅಲ್ಲಿ 144 ಸೆಕ್ಷನ್​ಅನ್ನು ಜಾರಿಗೊಳಿಸಲಾಗಿತ್ತು.

ಇದೀಗ, ಇಲ್ಲಿನ ಐದು ವೇಶ್ಯಾಗೃಹಗಳನ್ನು ಮುಚ್ಚಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಜಾರಿಗೊಳಿಸಲಾಗಿದ್ದ 144 ಸೆಕ್ಷನ್​ಅನ್ನು ತೆರವುಗೊಳಿಸಲಾಗಿದೆ. ವೇಶ್ಯಾಗೃಹಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಎ ವಿರೋಧಿಸಿ ನಾಟಕ ಪ್ರದರ್ಶನ: ಇಲಾಖಾ ತನಿಖೆ ನಡೆಸುವಂತೆ ಡಿಜಿಪಿಗೆ ಶಿಫಾರಸು

ಇನ್ಮುಂದೆ ಈ ಪ್ರದೇಶಗಳಲ್ಲಿ ಇಂಥ ಪ್ರಕರಣಗಳು ಕಂಡು ಬಂದರೆ, ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details