ವಾರಣಾಸಿ, ಉತ್ತರ ಪ್ರದೇಶ :ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜನರು ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.
ಧನುರಾಶಿಯಿಂದ ಮಕರ ರಾಶಿಗೆ ಸೂರ್ಯನ ಪ್ರವೇಶ ಶುಕ್ರವಾರ ರಾತ್ರಿ 8:30ಕ್ಕೆ ಆಗಿದೆ. ಆದ್ದರಿಂದ ಶನಿವಾರ ಮಧ್ಯಾಹ್ನ 12:49ರವರೆಗೆ ಸಂಕ್ರಾಂತಿಯ ಅವಧಿ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪವಿತ್ರ ಸ್ನಾನವೂ ಇಂದೇ ನಡೆಯುತ್ತಿವೆ.