ಕರ್ನಾಟಕ

karnataka

By

Published : Feb 22, 2021, 2:37 PM IST

Updated : Feb 22, 2021, 3:33 PM IST

ETV Bharat / bharat

ಮಗುವಿನ ಜೀವ ಉಳಿಸಲು 16 ಕೋಟಿ ರೂ. ನೆರವು ನೀಡಿದ 'ಕ್ರೌಡ್ ಫಂಡಿಂಗ್'.. ಹೇಗೆ ಕೆಲಸ ಮಾಡುತ್ತೆ ಈ ವ್ಯವಸ್ಥೆ!

ಕ್ರೌಡ್‌ ಫಂಡಿಂಗ್ ಎನ್ನುವುದು ಜನರ ಸಹಾಯದೊಂದಿಗೆ ಹಣ ಸಂಗ್ರಹಿಸುವ ಹೊಸ ತಂತ್ರಜ್ಞಾನ. ಆನ್‌ಲೈನ್ ಪ್ಲಾಟ್‌ಫಾರ್ಮ್, ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನ ಯಾವುದೇ ಸ್ಥಳದಲ್ಲಿ ಸಹಾಯ ಅಗತ್ಯವಿರುವ ಜನರಿಗೆ ತಮ್ಮ ಬ್ಯಾಂಕ್​ ಅಕೌಂಟ್ ಮೂಲಕ ಹಣ ಟ್ರಾನ್ಸ್​ಫರ್​ ಮಾಡಬಹುದಾಗಿದೆ..

Crowdfunding to the rescue of a Mumbai family
ಕ್ಲೌಡ್ ಫಂಡಿಂಗ್‌ ಮಾಡುವಾಗ ಎಚ್ಚರಿಕೆಯಿಂದಿರಿ

ಮುಂಬೈ :ಆನ್‌ಲೈನ್ ಕ್ರೌಡ್‌ ಫಂಡಿಂಗ್ ಪ್ಲಾಟ್‌ಫಾರ್ಮ್‌ಗಳು ಅಗತ್ಯವಿರುವ ಜನರಿಗೆ ಹಣಕಾಸಿನ ನೆರವು ನೀಡುವ ಮೂಲವಾಗಿ ಹೊರಹೊಮ್ಮಿವೆ.

ಟೀರಾ ಕಾಮತ್ ಎಂಬ ಮಗು ಕೂಡ ಸ್ಪೈನಲ್​​ ಮಸ್ಕ್​ಕ್ಯೂಲರ್​ ಅಟ್ರೋಫಿ (ಬೆನ್ನು ಸ್ನಾಯು ಕ್ಷೀಣತೆ) ಎಂಬ ಭಯಾನಕ ಕಾಯಿಲೆಯಿಂದ ಬಳಲುತ್ತಿದೆ. ಈ ಕಾಯಿಲೆಗೆ ಇರುವ ಏಕೈಕ ಔಷಧ ಚುಚ್ಚುಮದ್ದು, ಇದರ ಬೆಲೆ ಬರೋಬ್ಬರಿ ರೂ. 16 ಕೋಟಿ ರೂ.

ಟೀರಾ ಸದ್ಯ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗು ಗರಿಷ್ಠ 18 ತಿಂಗಳು ಬದುಕಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಮಗುವಿನ ಜೀವ ಉಳಿಸಲು ಔಷಧಿಯೇನೋ ಲಭ್ಯವಿದೆ.

ಆದರೆ, ಆ ಔಷಧ ವಿದೇಶಗಳಲ್ಲಿ ಮಾತ್ರ ದೊರೆಯುತ್ತದೆ ಮತ್ತು ಮಗುವಿನ ಪ್ರಾಣ ಉಳಿಸಬಲ್ಲ ಆ ಇಂಜೆಕ್ಷನ್​ ಅತ್ಯಂತ ದುಬಾರಿ. ಆದರೂ ಇಂಜೆಕ್ಷನ್​ ತುರ್ತಾಗಿ ನೀಡಬೇಕಿದೆ. ಇಲ್ಲವಾದ್ರೇ ಮಗುವಿನ ಪ್ರಾಣಕ್ಕೆ ಆಪತ್ತು.

ಆದರೆ, ಮಗುವಿನ ತಂದೆ-ತಾಯಿ ಮಧ್ಯಮ ವರ್ಗದವರಾಗಿರುವುದರಿಂದ, ಇಷ್ಟು ದೊಡ್ಡ ಮೊತ್ತ ಸಂಗ್ರಹಿಸುವುದು ಅವರಿಗೆ ಅಸಾಧ್ಯವಾಗಿತ್ತು. ಆದರೂ ಅವರು ಎದುಗುಂದಲಿಲ್ಲ. ಮಗುವಿನ ಚಿಕಿತ್ಸೆಗೆ ಅಗತ್ಯವಿರುವ ಹಣ ಸಂಗ್ರಹಕ್ಕೆ ಶತ ಪ್ರಯತ್ನ ಮಾಡಿದರು.

ಕೊನೆಗೆ, ಅವರು ಹಣಕ್ಕಾಗಿ ಕ್ರೌಡ್ ಫಂಡಿಂಗ್ ಮೊರೆ ಹೋದ್ರು. ಇದೀಗ ಟೀರಾ ಚಿಕಿತ್ಸೆಗೆ ಬೇಕಿರುವಷ್ಟು ಹಣ ಕ್ರೌಡ್ ಫಂಡಿಂಗ್‌ನಿಂದ ಸಂಗ್ರಹವಾಗಿದೆ. ಭಾರತದಿಂದ ಮಾತ್ರವಲ್ಲ, ಈ ದಂಪತಿಗೆ ವಿದೇಶದಿಂದಲೂ ಆರ್ಥಿಕ ಸಹಾಯ ದೊರಕಿದೆ.

ಈ ಬಗ್ಗೆ ಪ್ರತಿಕ್ರಿಯಿಸ ಟೀರಾ ತಂದೆ ಮಿಹಿರ್​ ಕಾಮತ್​, ನಾವು ನಮ್ಮ ಮಗಳನ್ನು ಉಳಿಸಿಕೊಳ್ಳಲು ಹಣದ ನೆರವು ಕೋರಿ Impact Guru ಮತ್ತು GoFundMe ವೆಬ್​ಸೈಟ್‌ನ ಸಂಪರ್ಕಿಸಿದೆವು. ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ತೀರಾ ಕಾಯಿಲೆಯ ಬಗ್ಗೆ ನಾವು ಜನರಿಗೆ ಮಾಹಿತಿ ನೀಡಿದ್ದೇವೆ. ಜನ ನಮ್ಮ ಸಮಸ್ಯೆ ಅರಿತು ನಮಗೆ ಹಣವನ್ನು ದೇಣಿಗೆ ನೀಡಲು ಆರಂಭಿಸಿದ್ರು ಎಂದು ತಿಳಿಸಿದ್ರು.

ಏನಿದುಕ್ರೌಡ್ಫಂಡಿಂಗ್‌? :ಕ್ರೌಡ್‌ ಫಂಡಿಂಗ್ ಎನ್ನುವುದು ಜನರ ಸಹಾಯದೊಂದಿಗೆ ಹಣ ಸಂಗ್ರಹಿಸುವ ಹೊಸ ತಂತ್ರಜ್ಞಾನ. ಆನ್‌ಲೈನ್ ಪ್ಲಾಟ್‌ಫಾರ್ಮ್, ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನ ಯಾವುದೇ ಸ್ಥಳದಲ್ಲಿ ಸಹಾಯ ಅಗತ್ಯವಿರುವ ಜನರಿಗೆ ತಮ್ಮ ಬ್ಯಾಂಕ್​ ಅಕೌಂಟ್ ಮೂಲಕ ಹಣ ಟ್ರಾನ್ಸ್​ಫರ್​ ಮಾಡಬಹುದಾಗಿದೆ.

ಅದು ಸಾಮಾಜಿಕ ಕಾರ್ಯಗಳಿಗೆ ಅಥವಾ ವೈಯಕ್ತಿಕ ಕಾರಣಕ್ಕೆ ಇರಬಹುದು (ಶಿಕ್ಷಣ,ವೈದ್ಯಕೀಯ ಸೌಲಭ್ಯ ಇತ್ಯಾದಿ)ಇದರಲ್ಲಿ ಹಣವನ್ನು ದೇಣಿಗೆ ರೂಪದಲ್ಲಿ ನೀಡುವವರಿಗೆ ಮರುಪಾವತಿ ಮಾಡಲಾಗುವುದಿಲ್ಲ. ಹಾಗೂ ಈ ಕ್ರೌಡ್​​ ಫಂಡಿಂಗ್​ಗೆ ತನ್ನದೇ ಆದ ಮಿತಿಗಳು ಸಹ ಇವೆ.

ಕ್ರೌಡ್​ ಫಂಡಿಂಗ್‌ ಮಾಡುವಾಗ ಎಚ್ಚರಿಕೆಯಿಂದಿರಿ

ಕ್ರೌಡ್​ ಫಂಡಿಂಗ್‌ ಮಾಡುವಾಗ ಎಚ್ಚರಿಕೆಯಿಂದಿರಿ :ಕ್ರೌಡ್​ಫಂಡಿಂಗ್‌ನಲ್ಲಿ ಆರ್ಥಿಕ ನೆರವು ಹೊರತುಪಡಿಸಿ, ಹೂಡಿಕೆಯಲ್ಲಿ ಹೆಚ್ಚು ಲಾಭ ಗಳಿಸಬಹುದು. ಹೀಗಾಗಿ, ಈ ಕ್ಷೇತ್ರದಲ್ಲಿ ಸೈಬರ್ ಅಪರಾಧ ಹೆಚ್ಚುತ್ತಿವೆ. ಆದ್ದರಿಂದ, ಬಳಕೆದಾರರು ಜಾಗರೂಕರಾಗಿರಬೇಕು. ಕ್ರೌಡ್ ಫಂಡಿಂಗ್‌ನಲ್ಲಿ ಹಣವನ್ನು ದೇಣಿಗೆ ನೀಡುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸಹಾಯ ನಿರೀಕ್ಷಿಸುತ್ತಿರುವ ವ್ಯಕ್ತಿಯ ರುಜುವಾತುಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಸಹಾಯವನ್ನು ಬಯಸುವ ವ್ಯಕ್ತಿಯು ತನ್ನ ವ್ಯವಹಾರಕ್ಕಾಗಿ ಅಥವಾ ಹಣಕಾಸಿನ ಸಹಾಯಕ್ಕಾಗಿ ಅಥವಾ ನ್ಯಾಯಯುತ ಕಾರಣಕ್ಕಾಗಿ ಇದನ್ನ ಬಳಸುತ್ತಿದ್ದಾನೆಯೇ ಎಂದು ವ್ಯಕ್ತಿಯ ಸೂಕ್ತ ಗುರುತಿನ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಹಣ ಹೂಡಿಕೆ ಮಾಡುವುದು ಒಳ್ಳೆಯದು.

Last Updated : Feb 22, 2021, 3:33 PM IST

ABOUT THE AUTHOR

...view details