ಮುಂಬೈ: ಮಹಾರಾಷ್ಟ್ರದಲ್ಲಿ ಗುರುವಾರ 43 ಸಾವಿರ ಕೋವಿಡ್ ಪಾಸಿಟಿವ್ ಕೇಸ್ಗಳು ವರದಿಯಾಗಿವೆ. ಪುಣೆಯೊಂದರಲ್ಲೇ 8 ಸಾವಿರ ಪ್ರಕರಣಗಳು ದಾಖಲಾದರೆ, ಮುಂಬೈ ಮಹಾನಗರದಲ್ಲೂ 8 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಕೋವಿಡ್ ಕೇಸ್ ದಿನಕ್ಕೆ 40 ಸಾವಿರ ದಾಟಿದರೂ ಇಲ್ಲಿನ ಮಾರುಕಟ್ಟೆಯಲ್ಲಿ ಜನವೋ ಜನ! - ಪುಣೆಯಲ್ಲಿ ಸುದ್ದಿ
ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 43 ಸಾವಿರ ಕೋವಿಡ್ ಪಾಸಿಟಿವ್ ಕೇಸ್ಗಳು ವರದಿಯಾಗಿದ್ದರೂ, ದಾದರ್ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಜನ ಜಂಗುಳಿ ಕಂಡುಬಂತು.
ದಾದರ್ ತರಕಾರಿ ಮಾರುಕಟ್ಟೆ
ನಿತ್ಯವೂ ಅರ್ಧ ಲಕ್ಷ ಜನ ಕೊರೊನಾ ಪೀಡಿತರಾಗುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ಇಷ್ಟಿದ್ದರೂ ಮುಂಬೈ ಮಹಾನಗರದ ದಾದರ್ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಜನ ಜಂಗುಳಿ ಕಂಡುಬಂತು.
ಮಹಾಮಾರಿ ಇಡೀ ನಗರವನ್ನ ಇನ್ನಿಲ್ಲದಂತೆ ಕಾಡುತ್ತಿದ್ದರೂ ಜನ ಮಾತ್ರ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ತರಕಾರಿ ಮಾರುಕಟ್ಟೆಗೆ ದಾಂಗುಡಿ ಇಟ್ಟು ಎಂದಿನಂತೆ ತರಕಾರಿ ಖರೀದಿಯಲ್ಲಿ ನಿರತರಾಗಿದ್ದರು.