ಗುವಾಹಟಿ, ಅಸ್ಸೋಂ: ಅಸ್ಸೋಂನ ಚಹಾ ಉದ್ಯಮವು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಅಸ್ಸೋಂ ಭಾರತದ ಒಟ್ಟು ಚಹಾ ಉತ್ಪಾದನೆಯಲ್ಲಿ ಶೇಕಡ 52 ರಷ್ಟು ಉತ್ಪಾದಿಸುತ್ತದೆ. ಆದರೆ, ಇತ್ತೀಚೆಗೆ ಅಸ್ಸೊಂ ರಾಜ್ಯದಲ್ಲಿ ಇನ್ನೂರು ವರ್ಷಗಳಷ್ಟು ಹಳೆಯದಾದ ಚಹಾ ಉದ್ಯಮವು ವಿವಿಧ ಕಾರಣಗಳಿಂದ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಚಹಾ ಉದ್ಯಮದ ಭವಿಷ್ಯವು ಈಗ ಅಸುರಕ್ಷಿತವಾಗಿದೆ ಎನ್ನಲಾಗ್ತಿದೆ.
2017 ರಿಂದ 2022 ರವರೆಗೆ, ಅಸ್ಸೋಂನ 68 ಚಹಾ ತೋಟಗಳನ್ನು ಈ ಚಹಾ ಎಸ್ಟೇಟ್‌ಗಳನ್ನು ಹೊಂದಿರುವ ಬಂಡವಾಳಶಾಹಿ ಗುಂಪು ಮಾರಾಟ ಮಾಡಿವೆ ಎಂಬುದು ಗಮನಾರ್ಹ. ಇತರ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ದೇಶದ ಬಂಡವಾಳಶಾಹಿ ಗುಂಪು ಅಸ್ಸೋಂನ ಚಹಾ ಉದ್ಯಮವನ್ನು ಭೀಕರ ಬಿಕ್ಕಟ್ಟಿಗೆ ತಂದಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದ ಚಹಾ ಉದ್ಯಮಕ್ಕೆ ಇದು ಒಳ್ಳೆಯ ಲಕ್ಷಣವಲ್ಲ ಎನ್ನತ್ತಿದ್ದಾರೆ ಟೀ ನೌಕರರ ಸಂಘದ ಸದಸ್ಯರು.
ಅಸ್ಸೋಂ ರಾಜ್ಯದ ಖ್ಯಾತಿಯನ್ನು ಹೆಚ್ಚಿಸಿದ ಮತ್ತು ವಿಶೇಷವಾಗಿ ರಾಜ್ಯದ ಆರ್ಥಿಕತೆಯ ಅಡಿಪಾಯವನ್ನು ಹಾಕಿದ ಚಹಾ ಉದ್ಯಮವು ಈಗ ಭಯಾನಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಸ್ಸೋಂ ಟೀ ನೌಕರರ ಸಂಘ ಕೂಡ ಇದನ್ನು ದೃಢಪಡಿಸಿದೆ. ಮಾಹಿತಿಗಳ ಪ್ರಕಾರ, ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ತೋಟವನ್ನು ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆದ ಬಂಡವಾಳಶಾಹಿಗಳ ಒಂದು ವಿಭಾಗವು ಈಗ ರಾಜ್ಯದ ಚಹಾ ಉದ್ಯಮದಲ್ಲಿ ಈ ಭೀಕರ ಬಿಕ್ಕಟ್ಟನ್ನು ಸೃಷ್ಟಿಸಿದೆ. ಟೀ ಕಂಪನಿಗಳ ಒಂದು ವಿಭಾಗವು ಆ ಸಮಯದಲ್ಲಿ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ತೋಟಗಳನ್ನು ಮಾರಾಟ ಮಾಡುವಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬುದು ತಿಳಿದುಬಂದಿದೆ.
ರಾಜ್ಯದ ಚಹಾ ಉದ್ಯಮಕ್ಕೆ ಧಕ್ಕೆ ತಂದು ಇತರ ವ್ಯವಹಾರಗಳತ್ತ ಗಮನ ಹರಿಸಿರುವ ಬಂಡವಾಳಶಾಹಿಗಳ ಒಂದು ವಿಭಾಗವು ನಿಯಮಿತವಾಗಿ ಚಹಾ ತೋಟಗಳನ್ನು ಒಂದರ ನಂತರ ಒಂದರಂತೆ ಮಾರಾಟ ಮಾಡುತ್ತಿದೆ. ಅಸ್ಸೋಂನಲ್ಲಿ 16 ಟೀ ತೋಟಗಳನ್ನು ಮಾರಾಟ ಮಾಡಿದ ನಂತರ ಮೆಕ್ಲಿಯೋಡ್ ರಸೆಲ್ ಇಂಡಿಯಾ ಟೀ ಕಂಪನಿಯು ಅಸ್ಸೋಂನ 15 ಚಹಾ ತೋಟಗಳನ್ನು 700 ಕೋಟಿ ರೂ.ಗೆ ಬ್ಯಾಂಕ್ ಸಾಲವನ್ನು ಪಾವತಿಸಲು ಮಾರಾಟ ಮಾಡಿದೆ. ಈ 15 ಟೀ ಎಸ್ಟೇಟ್‌ಗಳಲ್ಲಿ ಆರು ತಿನ್ಸುಕಿಯಾ ಜಿಲ್ಲೆಗೆ ಸೇರಿದ್ದಾಗಿವೆ ಎಂಬುದು ಗಮನಾರ್ಹ.