ಕರ್ನಾಟಕ

karnataka

ETV Bharat / bharat

ಕುಡಿದ ಅಮಲಿನಲ್ಲಿ ನಿವೃತ್ತ ಪೊಲೀಸ್​ ಜತೆ ​ಜಗಳ: ನಡು ರಸ್ತೆಯಲ್ಲೇ ನಡೀತು ಭಯಾನಕ ಕೊಲೆ! - ಕ್ರಿಮಿನಲ್​​-ಪೊಲೀಸ್​ ನಡುವೆ ಜಗಳ

ಕುಡಿದ ಅಮಲಿನಲ್ಲಿ ಕ್ರಿಮಿನಲ್​ ಒಬ್ಬ ನಿವೃತ್ತ ಪೊಲೀಸ್​ ಅಧಿಕಾರಿ ಜತೆ ಜಗಳ ತೆಗೆದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Criminal killed in a scuffle with retired police in Pune
Criminal killed in a scuffle with retired police in Pune

By

Published : Apr 16, 2021, 8:43 PM IST

ಪುಣೆ(ಮಹಾರಾಷ್ಟ್ರ):ಪುಣೆಯ ಖಡ್ಕಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕುಡಿದು ಅಮಲಿನಲ್ಲಿ ಕ್ರಿಮಿನಲ್​ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಜತೆ ಜಗಳ ತೆಗೆದು, ಸಾವನ್ನಪ್ಪಿದ್ದಾನೆ.

ಕುಡಿದ ಅಮಲಿನಲ್ಲಿ ನಿವೃತ್ತ ಪೊಲೀಸ್​ ಜತೆ ಕ್ರಿಮಿನಲ್​​ ​ಜಗಳ

ಬೈಕ್​ ಮೇಲೆ ಹೋಗುತ್ತಿದ್ದ ನಿವೃತ್ತ ಪೊಲೀಸನನ್ನು ನಿಲ್ಲಿಸಿರುವ ಕ್ರಿಮಿನಲ್​ ಜಗಳ ತೆಗೆದಿದ್ದಾನೆ. ಇಬ್ಬರ ನಡುವಿನ ಜಗಳ ತಾರಕ್ಕೇರಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕ್ರಿಮಿನಲ್​​ ಹತ್ಯೆಗೊಳಗಾಗಿದ್ದಾನೆ. ಇದರ ಸಿಸಿಟಿವಿ ದೃಶ್ಯಾವಳಿ ವೈರಲ್​ ಆಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ನಿವೃತ್ತ ಪೊಲೀಸ್​ ಅಧಿಕಾರಿಯ ಬಂಧನ ಮಾಡಿದ್ದಾರೆ. ಮನೀಶ್​ ಕಲುರಾಮ್​ ಭೋಸಲೆ ಸಾವನ್ನಪ್ಪಿದ್ದು, ನಿವೃತ್ತ ಪೊಲೀಸ್​ ಕಾನ್​​ಸ್ಟೇಬಲ್​ ಅನಂತ್​ ಓವಲ್​ ಬಂಧಿತ ನಿವೃತ್ತ ಪೊಲೀಸ್​. ಮನೀಶ್​ ವಿರುದ್ಧ ಐದು ಪ್ರಕರಣ ದಾಖಲಾಗಿದ್ದು, ಅವರು ಮದ್ಯದ ಚಟ ಹೊಂದಿದ್ದರು.

ಇದನ್ನೂ ಓದಿ: ಭರತ್​ಪುರದ ರಾಷ್ಟ್ರೀಯ ಉದ್ಯಾನದೊಂದಿಗೆ ಸೈಬೀರಿಯನ್ ಕೊಕ್ಕರೆಗಳಿಗಿದೆ ಶತ -ಶತಮಾನಗಳ ನಂಟು!

ಅನಂತ್ ಓವಲ್ ಏಪ್ರಿಲ್​​ 12 ರಂದು ಸಂಜೆ ಬೋಪೋಡಿಯ ಆನಂದನಗರ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ, ಮನೀಶ್​ ಭೋಸಲೆ ಅವರ ಬೈಕ್​ ನಿಲ್ಲಿಸಿ, ವಾದಕ್ಕಿಳಿದಿದ್ದಾರೆ. ಈ ವೇಳೆ ಇಬ್ಬರು ಪರಸ್ಪರ ಕೈ-ಕೈ ಮಿಲಾಯಿಸಿದ್ದು, ಮನೀಶ್​ ಮೇಲೆ ಅನಂತ್​ ಜೋರಾಗಿ ಹಲ್ಲೆ ನಡೆಸಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ABOUT THE AUTHOR

...view details