ಕರ್ನಾಟಕ

karnataka

ETV Bharat / bharat

ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಕ್ರಿಮಿನಲ್ ಕೇಸ್​ ದಾಖಲು! - ಭಾರತದ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ

ಭಾರತದ ಕ್ರಿಕೆಟರ್​ ಪೃಥ್ವಿ ಶಾ ವಿರುದ್ದ ಸೋಷಿಯಲ್​ ಮಿಡಿಯಾ ಇನ್​ಫ್ಲೂಯೆನ್ಸ್​ರ್​ ಸಪ್ನಾ ಗಿಲ್ ಕ್ರಿಮಿನಲ್​ ಕೇಸ್​ ದಾಖಲಿಸಿದ್ದಾರೆ.

ಪೃಥ್ವಿ ಶಾ ವಿರುದ್ಧ ಕ್ರಿಮಿನಲ್ ಕೇಸ್​
ಪೃಥ್ವಿ ಶಾ ವಿರುದ್ಧ ಕ್ರಿಮಿನಲ್ ಕೇಸ್​

By

Published : Apr 6, 2023, 11:50 AM IST

ಮುಂಬೈ:ಪೃಥ್ವಿ ಶಾ ವಿರುದ್ಧ ಸೋಷಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್​ ಸಪ್ನಾ ಗಿಲ್ ಬುಧವಾರ ಮುಂಬೈ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಎರಡು ತಿಂಗಳ ಹಿಂದೆ ಅಂಧೇರಿಯ ಕ್ಲಬ್‌ನಲ್ಲಿ ಸಪ್ನಾ ಮತ್ತು ಫೃಥ್ವಿ ಶಾ ನಡುವೆ ಸೆಲ್ಫಿ ವಿಚಾರವಾಗಿ ಗಲಾಟೆ ನಡೆದಿತ್ತು. ಈ ವೇಳೆ, ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಪ್ನಾ ಆರೋಪಿಸಿದ್ದಾರೆ. ಅಲ್ಲದೇ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಸಭ್ಯತೆಯ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಬೇಕು ಎಂದು ಗಿಲ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354, ಸೆಕ್ಷನ್ 324 ಮತ್ತು ಸೆಕ್ಷನ್ 509ರ ಅಡಿ ಎಫ್‌ಐಆರ್ ದಾಖಲಿಸುವಂತೆ ಕೋರಿ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸಪ್ನಾ ಗಿಲ್ ಅವರ ವಕೀಲ ಅಲಿ ಕಾಸಿಫ್ ಖಾನ್ ಹೇಳಿದ್ದಾರೆ. ಫೆಬ್ರವರಿಯಲ್ಲಿ ಪೃಥ್ವಿ ಶಾ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಪ್ನಾ ಗಿಲ್ ಆರೋಪಿಸಿದ್ದಾರೆ. ಪೃಥ್ವಿ ಶಾ ಮತ್ತು ಅವರ ಸ್ನೇಹಿತನ ವಿರುದ್ಧದ ಆರೋಪಗಳ ಜೊತೆಗೆ ಸರ್ಕಾರಿ ಆಸ್ಪತ್ರೆಯಿಂದ ನೀಡಲಾದ ವೈದ್ಯಕೀಯ ವರದಿಯನ್ನು ದೂರಿಗೆ ಲಗತ್ತಿಸಲಾಗಿದೆ ಎಂದು ಖಾನ್ ಹೇಳಿದರು.

ಪೃಥ್ವಿ ಶಾ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳದ ಮತ್ತು ತಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದಕ್ಕಾಗಿ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧವೂ ಪ್ರತ್ಯೇಕ ದೂರು ದಾಖಲಿಸಲಾಗಿದೆ ಎಂದು ಖಾನ್ ಹೇಳಿದರು. ಎರಡೂ ಪ್ರಕರಣಗಳು ಏಪ್ರಿಲ್ 17 ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ. ಫೆಬ್ರುವರಿಯಲ್ಲಿ ಅಂಧೇರಿಯ ಹೋಟೆಲ್‌ವೊಂದರಲ್ಲಿ ಸೆಲ್ಫಿ ತೆಗೆಯುವ ವಿಚಾರದಲ್ಲಿ ನಡೆದ ಜಗಳದಲ್ಲಿ ಸಪ್ನಾ ಗಿಲ್ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು.

ಸದ್ಯ ಸಪ್ನಾ ಗಿಲ್​ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಸಪ್ನಾ ಗಿಲ್, ಪೃಥ್ವಿ ಶಾ ಅವರ ಸ್ನೇಹಿತ ಆಶಿಶ್ ಯಾದವ್ ಮತ್ತು ಇತರರ ವಿರುದ್ಧ ಅಂಧೇರಿಯ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಿ, ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ವಿಚಾರವಾಗಿ ಬ್ಯಾಟರ್​ ಪೃಥ್ವಿ ಶಾ ವಿರುದ್ಧ ಮುಂಬೈ ಪೊಲೀಸ್​ ಠಾಣೆಯಲ್ಲಿ ಈವರೆಗೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಇದನ್ನೂ ಓದಿ:ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ: ನಾಲ್ಕನೇ ಆರೋಪಿ ಬಂಧಿಸಿದ ಪೊಲೀಸರು

ಪ್ರಕಣದ ಹಿನ್ನೆಲೆ: ಮುಂಬೈ: ಫೆಬ್ರವರಿ 15 ರಂದು ಮುಂಬೈನ ಪಂಚತಾರಾ ಹೋಟೆಲ್​ವೊಂದರ ಮುಂದೆ ಸೆಲ್ಫಿ ನಿರಾಕರಿಸಿದ ಭಾರತದ ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸಪ್ನಾ ಗಿಲ್​ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:ಸೆಲ್ಫಿ ವಿವಾದ: ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ಸ್ಪಪ್ನಾ ಗಿಲ್​​​​​ ಅರ್ಜಿ

ABOUT THE AUTHOR

...view details