ನವದೆಹಲಿ:ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಚೂರಿ ಇರಿದು ರಕ್ತ ಸುರಿಯುವುದು ಸಾಮಾನ್ಯ ಸಂಗತಿಯಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ಜಗಳವಾದಾಗ ಪರಸ್ಪರ ಚಾಕುವಿನಿಂದ ಹಲ್ಲೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಜಗಳಗಳಲ್ಲಿ ಮಧ್ಯಪ್ರವೇಶಿಸಲು ಯಾರೂ ಮುಂದೆ ಬರದಿರುವುದು ಅತ್ಯಂತ ಆತಂಕ ಸಂಗತಿ. ರಸ್ತೆಗಳು ಮತ್ತು ಬೀದಿಗಳಲ್ಲಿ ನಡೆಯುತ್ತಿದ್ದ ಪ್ರಕರಣಗಳು ಈಗ ಶಾಲಾ - ಕಾಲೇಜುಗಳಲ್ಲಿಯೂ ಸಹ ಮುನ್ನೆಲೆಗೆ ಬರುತ್ತಿವೆ.
ಹೌದು, ದೆಹಲಿಯ ಸೌತ್ ಕ್ಯಾಂಪಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಯಭಟ್ಟ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ವಿದ್ಯಾರ್ಥಿ ನಿಖಿಲ್ ಎಂದು ತಿಳಿದು ಬಂದಿದ್ದು, ಆರೋಪಿಗಳನ್ನು ಬಿಂದಾಪುರ ನಿವಾಸಿ ರಾಹುಲ್ (19) ಮತ್ತು ಜನಕಪುರಿ ನಿವಾಸಿ ಹರೂನ್ (19) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ಕೆಲ ದಿನಗಳ ಹಿಂದೆ ಯುವತಿಗೆ ಕಿರುಕುಳ ನೀಡುವ ಬಗ್ಗೆ ನಿಖಿಲ್ ಮತ್ತು ರಾಹುಲ್, ಹರೂನ್ ನಡುವೆ ವಾಗ್ವಾದ ನಡೆದಿತ್ತು. ನಿಖಿಲ್ ಕಾಲೇಜು ಗೇಟ್‌ನ ಹೊರಗೆ ಒಬ್ಬನೇ ಇದ್ದಾಗ ಸಿಕ್ಕ ಅವಕಾಶ ಬಿಡಬಾರದೆಂದು ರಾಹುಲ್ ಮತ್ತು ಹರೂನ್ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಆರೋಪಿಗಳನ್ನು ಪೊಲೀಸರು ಗುರುತಿಸಿ, ಕೊಲೆ ಪ್ರಕರಣದಡಿ ಬಂಧಿಸಿದ್ದಾರೆ.
ಕೊಲೆ ಎಂಬುದು ದೃಢಪಡಿಸಿದ ದಕ್ಷಿಣ ಡಿಸಿಪಿ:ಚರಕ್ ಪಾಲಿಕೆ ಆಸ್ಪತ್ರೆಯಿಂದ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ನಿಖಿಲ್ ಚೌಹಾಣ್ ಎಂಬ 19 ವರ್ಷದ ಯುವಕ ಪಶ್ಚಿಮ ಬಿಹಾರದ ನಿವಾಸಿ. ಇವರಿಗೆ ಚೂರಿ ಇರಿತವಾಗಿದ್ದು, ಆರ್ಯಭಟ್ಟ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ. ಕೊಲೆಯಾದ ಯುವಕ ಬಿಎ ಆನರ್ಸ್ ರಾಜ್ಯಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿಖಿಲ್ ಸಾವಿನ ನಂತರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.