ಬಕ್ಸರ್ (ಬಿಹಾರ):ಮೂರು ದಶಕಗಳ ನಂತರ ಕಳ್ಳನೊಬ್ಬನನ್ನು ಬಿಹಾರದ ಬಕ್ಸರ್ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿರುವ ಕಾರ್ಯವು ಎಲ್ಲ ಹುಬ್ಬೇರಿಸುವಂತೆ ಮಾಡಿದೆ. ಹೌದು, ಇತ್ತೀಚೆಗೆ ನಡೆದ ಅಪರಾಧ ಸಭೆಯಲ್ಲಿ ಎಸ್‌ಪಿ ಛೀಮಾರಿ ಹಾಕಿದ್ದ ಬೆನ್ನಲ್ಲೆ, 1990ರಲ್ಲಿ ಹಲವಾರು ಕಳ್ಳತನದ ಘಟನೆಗಳನ್ನು ನಡೆಸಿ ತಲೆಮರೆಸಿಕೊಂಡಿದ್ದ ಕಳ್ಳನನ್ನು ಮೂರು ದಶಕಗಳ ಬಳಿಕ ಪೊಲೀಸರು ಬಿಹಾರದ ಬಕ್ಸರ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ವಿರುದ್ಧ ಹಲವು ವರ್ಷಗಳವರೆಗೆ ರೆಡ್ ವಾರಂಟ್ ಜಾರಿ ಮಾಡಲಾಗಿತ್ತು. ತಲೆಮರೆಸಿಕೊಂಡಿದ್ದ ಕಳ್ಳನನ್ನು 33 ವರ್ಷಗಳ ಬಳಿಕ ನಾಟಕೀಯ ರೀತಿಯಲ್ಲಿ ಆತನ ಮನೆಯಲ್ಲೇ ಬಂಧಿಸಿರುವ ಘಟನೆ ಜಿಲ್ಲೆಯ ದುಮ್ರಾವ್ ಉಪವಿಭಾಗದ ಕೃಷ್ಣಬ್ರಹ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
33 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದ ಖದೀಮ:ಮಾಹಿತಿ ಪ್ರಕಾರ, ಕೃಷ್ಣಬ್ರಹ್ಮ ಪೊಲೀಸ್ ಠಾಣೆ ವ್ಯಾಪ್ತಿಯ ಉಡಿಯಂಗಂಜ್ ನಿವಾಸಿ ಖ್ಯಾತ ಕಳ್ಳನಾಗಿದ್ದು, ಈ ಪ್ರದೇಶದಲ್ಲಿ ಅನೇಕ ಕಳ್ಳತನ ಘಟನೆಗಳ ಆರೋಪಿಯಾಗಿದ್ದಾನೆ. ಅವರು 1990ರಿಂದ ತಲೆಮರೆಸಿಕೊಂಡಿದ್ದು. ನ್ಯಾಯಾಲಯ ಆತನ ವಿರುದ್ಧ ರೆಡ್ ವಾರಂಟ್ ಜಾರಿ ಮಾಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ಆತ ಯಾವಾಗಲೂ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ.
ಬಾಕಿ ಇರುವ ವಾರಂಟ್ ಇತ್ಯರ್ಥಕ್ಕೆ ಎಸ್ಪಿ ಆದೇಶ:ಮತ್ತೊಂದೆಡೆ, ಕೆಲವು ದಿನಗಳ ಹಿಂದೆ ನಡೆದ ಅಪರಾಧ ಸಭೆಯಲ್ಲಿ ಎಸ್ಪಿ ಮನೀಶ್ ಕುಮಾರ್, ವಾರಂಟ್ ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಪಡಿಸಿ, ಅಪರಾಧಿಗಳನ್ನು ಕಂಬಿ ಹಿಂದೆ ಹಾಕುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಸಂತೋಷ್ ಕುಮಾರ್ ಅವರು, ತಲೆಮರೆಸಿಕೊಂಡಿದ್ದ ಆರೋಪಿ ಝಂಜತು ಅವರನ್ನು ಬಂಧಿಸಲು ಯತ್ನಿಸುತ್ತಿದ್ದರು. ಇದೇ ವೇಳೆ, ಆತ ಮನೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಬಳಿಕ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಮತ್ತೊಬ್ಬ ಕೊಲೆ ಆರೋಪಿ ಬಂಧನ:ಈತನ ಜೊತೆಗೆ ಅದೇ ಠಾಣೆ ವ್ಯಾಪ್ತಿಯ ಜಿತೇಂದ್ರ ರಾಮ್ ಎಂಬ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಈತ ಕೂಡ ಬಹಳ ದಿನ ತಲೆಮರೆಸಿಕೊಂಡಿದ್ದ. ಈ ವೇಳೆ, ಕೃಷ್ಣ ಬ್ರಹ್ಮಾವರ ಪೊಲೀಸ್ ಠಾಣೆ ಅಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಾಗಿ ಬಹಳ ದಿನಗಳಿಂದ ಶೋಧ ನಡೆಸಲಾಗುತ್ತಿದೆ. ಇದು ಪೊಲೀಸರಿಗೆ ತಲೆನೋವಾಗಿತ್ತು. 1990ರಲ್ಲಿ ಹಲವು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಈತನನ್ನು 33 ವರ್ಷಗಳ ಬಳಿಕ ಸ್ವಂತ ಮನೆಯಿಂದಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಹೈಕೋರ್ಟ್ ಜಡ್ಜ್ಗಳನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ.. ವಾಟ್ಸಾಪ್ ಮೂಲಕ ಬೆದರಿಕೆ ಹಾಕಿದ್ದ ಅಪರಿಚಿತನ ವಿರುದ್ಧ ಪ್ರಕರಣ