ಬಂದಾ (ಉತ್ತರ ಪ್ರದೇಶ):ಜಿಲ್ಲೆಯಲ್ಲಿ ಆ.23ರಂದು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಕೊಲೆ ಪ್ರಕರಣಕ್ಕೆ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಬಿಸಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಕೈರಿ ಗ್ರಾಮದಲ್ಲಿ ಆಗಸ್ಟ್ 23ರ ರಾತ್ರಿ ಕೆಲವು ಅಪರಿಚಿತರು, ಬಾಲ್ಕರನ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಬಾಲ್ಕರನ್ ಅವರ ಪತ್ನಿ ಆಗಸ್ಟ್ 24 ರಂದು ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹತ್ಯೆಯಾದ ಸ್ಥಳದಲ್ಲಿ ಪತ್ತೆಯಾಗದ ಶವ:ಮಧ್ಯರಾತ್ರಿ ನಡೆದ ಘಟನೆಯ ನಂತರ, ಬೆಳಗ್ಗೆ ಪತ್ನಿ ಪೊಲೀಸರಿಗೆ ಏಕೆ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತನಿಖೆಯ ವೇಳೆ, ಬಾಲ್ಕರನ್ ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವ್ಯಕ್ತಿ ಹತ್ಯೆಯಾದ ಸ್ಥಳದಲ್ಲಿ ಶವ ಪತ್ತೆಯಾಗಿಲ್ಲ. ಆದರೆ, ಇನ್ನೊಂದು ಸ್ಥಳದಲ್ಲಿ ಪತ್ತೆಯಾಗಿದೆ. ಸ್ಥಳದಲ್ಲೇ ಸಾಕ್ಷ್ಯ ನಾಶಪಡಿಸುವ ಪ್ರಯತ್ನವೂ ನಡೆದಿದೆ. ಇದರಿಂದ ಕೊಲೆ ಪ್ರಕರಣದಲ್ಲಿ ಬಾಲ್ಕರನ್ ಪತ್ನಿ ಸಂತೋಷಿಯಾ ಭಾಗಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಇದರೊಂದಿಗೆ ರಾಜ್‌ಕುಮಾರ್, ರಾಮನರೇಶ್ ಮತ್ತು ರಾಜೇಶ್ ಎಂಬ ಮೂವರ ಕೈವಾಡ ಇರುವುದು ಪತ್ತೆಯಾಗಿದೆ.
ಬಾಲ್ಕರನ್‌ನನ್ನು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ವಾಲ್ ತಿಳಿಸಿದ್ದಾರೆ. 2005ರ ಅಕ್ಟೋಬರ್‌ನಲ್ಲಿ ಬಾಲ್ಕರನ್ ತನ್ನ ಗ್ರಾಮದ ನಿವಾಸಿ ರಾಜಾರಾಮ್ ಪಟೇಲ್ ಎಂಬಾತನನ್ನು ಕೊಂದಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಇದಕ್ಕಾಗಿ ಬಾಲ್ಕರನ್ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆತ ಜನವರಿ 2023ರಲ್ಲಿ ಶಿಕ್ಷೆ ಅನುಭವಿಸಿದ ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು. ಬಾಲ್ಕರನ್ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಶಿಕ್ಷೆಯ ಅವಧಿಯಲ್ಲಿ, ಬಾಲ್ಕರನ್ ಅವರ ಪತ್ನಿ ಸಂತೋಷಿಯಾ, ಮೃತ ರಾಜಾರಾಮ್ ಅವರ ಸಹೋದರ ರಾಜಕುಮಾರ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು.
ಪತಿ ಕೊಲೆಗೆ ಸಂಚು ರೂಪಿಸಿದ ಪತ್ನಿ:ಜೈಲಿನಿಂದ ಹೊರಬಂದ ನಂತರ ಬಾಲ್ಕರನ್ ಆಗಾಗ್ಗೆ ಪತ್ನಿಗೆ ಚಿತ್ರಹಿಂಸೆ ನೀಡುತ್ತಿದ್ದ. ಆಕೆಯ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದರು. ಈ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ. ಈ ಸ್ಥಳದಲ್ಲಿ ಸಾಕ್ಷ್ಯ ನಾಶಪಡಿಸುವ ಯತ್ನವೂ ನಡೆದಿದೆ. ವಿಚಾರಣೆ ವೇಳೆ ಸಂತೋಷಿಯಾ ತನ್ನ ಪತಿಯಿಂದ ಮನನೊಂದಿರುವುದಾಗಿ ತಿಳಿಸಿದ್ದಾಳೆ. ತನ್ನ ಸಹೋದರನನ್ನು ಕೊಂದ ಬಾಲ್ಕರನ್‌ನಿಂದ ಸೇಡು ತೀರಿಸಿಕೊಳ್ಳಲು ಬಯಸಿದ್ದ ರಾಜಕುಮಾರನ ಜೊತೆಗೆ ಸಂಬಂಧ ಹೊಂದಿದ್ದಳು. ಇಬ್ಬರೂ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಗ್ರಾಮದ ರಾಮನರೇಶ್ ಕೂಡಾ ಬಾಲ್ಕರನ್ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದ. ಆತನ ತಮ್ಮ ಸಹ ಜೊತೆಗೆ ಸೇರಿಸಿಕೊಂಡಿದ್ದರು. ಆಗಸ್ಟ್ 23ರಂದು ಬಾಲ್ಕರನ್ ಮನೆಯಲ್ಲಿ ಮಲಗಿದ್ದಾಗ ಪತ್ನಿ ಸಂತೋಷಿಯಾ, ರಾಜ್‌ಕುಮಾರ್‌ಗೆ ದೂರವಾಣಿ ಕರೆ ಮಾಡಿದ್ದಳು.
ಸಾಕ್ಷ್ಯ ನಾಶಕ್ಕೆ ಮುಂದಾದ ಆರೋಪಿ ಹೆಂಡತಿ:ಇದಾದ ನಂತರ ರಾಜ್‌ಕುಮಾರ್ ತಮ್ಮ ಸೋದರಳಿಯ ರಾಜೇಶ್ ಪಟೇಲ್ ಮತ್ತು ರಾಮನರೇಶ್ ಜೊತೆಗೆ ತಮ್ಮ ಮನೆಗೆ ಬಂದರು. ನಂತರ ಮೂವರು ಸೇರಿ ಬಾಲ್ಕರನನ್ನು ಗುಂಡಿಕ್ಕಿ ಕೊಂದರು. ಇದಾದ ಬಳಿಕ ಮೃತದೇಹವನ್ನು ಸ್ಥಳದಿಂದ ಎತ್ತಿ ಕೈಪಂಪ್ ಬಳಿ ಇಡಲಾಗಿತ್ತು. ಸಾಕ್ಷ್ಯ ನಾಶಗೊಳಿಸುವ ಉದ್ದೇಶದಿಂದ ಹೆಂಡತಿಯು ಅಪರಾಧದ ಸ್ಥಳವನ್ನು ಸ್ವಚ್ಛಗೊಳಿಸಿದ್ದರು. ಈ ಪ್ರಕರಣದಲ್ಲಿ ರಾಜೇಶ್ ಪಟೇಲ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಸಿಬಿಐ ಸೋಗಿನಲ್ಲಿ ದರೋಡೆ ಮಾಡಿದ್ದ ಐವರು ಆರೋಪಿಗಳು ಅಂದರ್.. 1 ಕೋಟಿ ರೂ. ಒಡಿಶಾ ಪೊಲೀಸರ ವಶ