ಕರ್ನಾಟಕ

karnataka

ETV Bharat / bharat

ತಂದೆಯನ್ನು ಮರದ ಹಲಗೆಯಿಂದ ಹೊಡೆದು ಕೊಂದ ಮಗ... 9 ಗಂಟೆಯಲ್ಲೇ ಆರೋಪಿ ಬಂಧಿಸಿದ ಪೊಲೀಸ್

ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ಮಗನೇ ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಆರೋಪಿಯೊಂದಿಗೆ ಪೊಲೀಸರು
ಆರೋಪಿಯೊಂದಿಗೆ ಪೊಲೀಸರು

By

Published : Aug 5, 2023, 12:34 PM IST

ಪ್ರಯಾಗರಾಜ್​(ಉತ್ತರ ಪ್ರದೇಶ):ನಗರದಲ್ಲಿ ಸಂತ ಮಗನೇ ಹೆತ್ತ ತಂದೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆ ಮಾಡಿದ ಆರೋಪಿ ಮಗ ಘಟನೆ ನಂತರ ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡ ಪ್ರಯಾಗ್​ರಾಜ್​ನ ಪೊಲೀಸರು ಕೇವಲ 9 ಗಂಟೆಯಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿದ್ದು ಮಾತ್ರವಲ್ಲದೇ, ಆತ ಕೊಲೆ ಮಾಡಲು ಬಳಸಿದ್ದ ಮರದ ಹಲಗೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ವಿವರ: 65 ವರ್ಷದ ಮೃತ ಹಂಸರಾಜ್​ ಸಿಂಗ್​ ತನ್ ಕುಟುಂಬದೊಂದಿಗೆ ಪ್ರಯಾಗ್​ರಾಜ್​ನ ಅತರ್ಸುಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮೀರಾಪುರ್ ಪ್ರದೇಶದಲ್ಲಿ ತನ್ನ ಪತ್ನಿ, ಇಬ್ಬರು ಪುತ್ರರು ಹಾಗೂ ಸೊಸೆಯರೊಂದಿಗೆ ವಾಸಿಸುತ್ತಿದ್ದ. ಆದರೆ, ಅವರ ಹಿರಿಯ ಮಗ ಧೀರೇಂದ್ರ ಕುಡಿತಕ್ಕೆ ಚಟನಾಗಿದ್ದ. 4 ಆಗಸ್ಟ್​ ರಂದು ತಂದೆ ಹಂಸರಾಜ್ ಮಗನೊಂದಿಗೆ ಮಾತನಾಡಲೆಂದು ತಡರಾತ್ರಿ ಕಾಯುತ್ತಿದ್ದರು. ಆದರೆ ಬಂದ ಮಗ ತಂದೆಯೊಂದಿಗೆ ಕ್ಷುಲಕ ವಿಚಾರಕ್ಕೆ ಜಗಳ ತೆಗೆದಿದ್ದಾನೆ. ಜಗಳ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಕೋಪಗೊಂಡಿದ್ದ ಧೀರೇಂದ್ರ ತಂದೆಗೆ ಅಲ್ಲೆ ಇದ್ದ ಮರದ ಹಲಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಕೂಗಾಟ ಕೇಳಿದ ಮನೆಯವರು ಹಾಗೂ ಅಕ್ಕಪಕ್ಕದವರು ಆಗಮಿಸಿದಾಗ ಭಯಭೀತನಾದ ಆರೋಪಿ ಸ್ಥಳದಿಂದ ಕಾಲ್ಕಿತ್ತು ತಲೆ ಮರೆಸಿಕೊಂಡಿದ್ದ. ತಂದೆ ಹಂಸರಾಜ್​ನನ್ನು 2ನೇ ಮಗ ಸ್ವರೂಪ್​ ರಾಣಿ ನೆಹರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಅಷ್ಟೊತ್ತಿಗಾಗಲೇ ತೀವ್ರ ರಕ್ತ ಸ್ರಾವ ಹಾಗೂ ಗಂಭೀರ ಗಾಯದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು. ಇದಾದ ಬಳಿಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತೀವ್ರ ತನಿಖೆ ಕೈಗೊಂಡರು. ಪರಾರಿಯಾದ ಆರೋಪಿ ಧೀರೇಂದ್ರನಿಗಾಗಿ ಹುಡುಕಾಟ ನಡೆಸಿ ಘಟನೆ ನಡೆದ 9 ಗಂಟೆಯೊಳಗೆ ಆತನನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದ್ದಾರೆ.

ಝಾನ್ಸಿ ನಗರದಲ್ಲಿ ಜೋಡಿ ಕೊಲೆ: ನಗರದ ನವಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಚೋರ್ ಗ್ರಾಮದಲ್ಲಿ ಮಗನೊಬ್ಬ ಹೆತ್ತ ತಂದೆ ತಾಯಿಯನ್ನೆ ಕೊಲೆ ಮಾಡಿರುವ ಘಟನೆ ನಡೆದಿದೆ. ಹತ್ಯೆ ಮಾಡಿದ್ದ ಮಗ ಮನೆಯ ಮೇಲೆ ಮಹಡಿಯಲ್ಲಿ ಬಾಗಿಲು ಲಾಕ್​ ಮಾಡಿ ಕುಳಿತಿದ್ದ. ತಂದೆ ಲಕ್ಷ್ಮೀ ಪ್ರಸಾದ್ (58) ಮತ್ತು ತಾಯಿ ವಿಮಲಾ (55) ಹತ್ಯೆಯಾದವರು. ಘಟನೆ ಬಳಿಕ ಅಕ್ಕಪಕ್ಕದ ಜನರಿಗೆ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಂದ ಪೊಲೀಸರು ಗಾಯಗೊಂಡಿದ್ದ ದಂಪತಿಗಳನ್ನು ಪರಿಶೀಲಿಸಿದಾಗ ಲಕ್ಷ್ಮಿ ಪ್ರಸಾದ್ ಸಾವನ್ನಪ್ಪಿದ್ದು, ವಿಮಲಾ ಗಾಯಗೊಂಡು ಮಲಗಿದ್ದರು.

ತಕ್ಷಣವೇ ಅವರನ್ನು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಅಲ್ಲಿ ಚಿಕಿತ್ಸೆ ವೇಳೆ ತಾಯಿ ವಿಮಲಾ ಕೂಡ ಸಾವನ್ನಪ್ಪಿದ್ದರು. ಇದಾದ ಬಳಿಕ ಪೊಲೀಸರು ಮನೆ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಮೇಲೆ ಮಹಡಿಯಲ್ಲಿ ಆರೋಪಿ ಕುಳಿತುಕೊಂಡಿದ್ದ, ಕೊಠಡಿಯ ಲಾಕ್​ನ್ನು ಮುರಿದು ಆತನನ್ನು ಪೊಲೀಸರು ವಿಚಾರಿಸಿದ್ದಾರೆ. ಆಗ ತಾನು ತಂದೆ-ತಾಯಯನ್ನು ದೊಣ್ಣೆಯಿಂದ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎಂಬುದು ಸಂಪೂರ್ಣ ವಿಚಾರಣೆ ಬಳಿಕವೇ ತಿಳಿದು ಬರಬೇಕಿದೆ.

ಇದನ್ನೂ ಓದಿ:ಷೇರು ವ್ಯವಹಾರದ ನಷ್ಟ ಭರಿಸಲಾರದೇ ಪತ್ನಿ- ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ!

ABOUT THE AUTHOR

...view details